ಬಸ್ ಕಂಡಕ್ಟರ್ ಮೇಲೆ ಹಲ್ಲೆ

ಹಾಸನ: ಕ್ಷುಲ್ಲಕ ಕಾರಣಕ್ಕೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ಜು.27 ರ ರಾತ್ರಿ 10.30 ರ ಸುಮಾರಿಗೆ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.
ಹಾಸನ ವಿಭಾಗದ ನಿರ್ವಾಹಕ ತಾರೇಶ್ ಎಂಬುವರ ಮೇಲೆ ಬಸ್ ನಿಲ್ದಾಣದ ಹೋಟೆಲ್ ಸಿಬ್ಬಂದಿಗಳಾದ ಅಕ್ಷಯ್, ಯಶ್ವಂತ್, ಮಂಜು, ಚೇತು ಮತ್ತು ಆಕಾಶ್ ಎಂಬುವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇವರೆಲ್ಲರೂ, ಮಹಿಳೆಯೊಬ್ಬರನ್ನ ರೇಗಿಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಕಂಡಕ್ಟರ್ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಐವರ ವಿರುದ್ಧ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.

Post a Comment

Previous Post Next Post