ಶಿಕ್ಷಣ ಇಲಾಖೆಯಲ್ಲಿ ಭಾರೀ ಭ್ರಷ್ಟಾಚಾರದುಡ್ಡು ಹೊಡೆಯಲು ಬೇಕಾದ ಕಂಪನಿಗೆ ಕಾಲೇಜು-ಹಾಸ್ಟೆಲ್ ಕಟ್ಟಡ ನಿರ್ಮಾಣ ಹೊಣೆ

ಹಾಸನ: ಇಂಜಿನಿಯರಿAಗ್, ಪಾಲಿಟೆಕ್ನಿಕ್, ಪ್ರಥಮ ದಜೆ ಕಾಲೇಜು ಹಾಗೂ ಪ್ರೌಢಶಾಲೆ, ಹಾಸ್ಟೆಲ್‌ಗಳಿಗೆ ಅಗತ್ಯವಿರುವ ಮೂಲ ಭೂತ ಸೌಕರ್ಯ ನೀಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕಿಡಿ ಕಾರಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 1200 ಕ್ಕೂ ಹೆಚ್ಚು, ಮೊಸಳೆ ಹೊಸಳ್ಳಿ
ಕಾಲೇಜಿನಲ್ಲಿ 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 
ಜಿಲ್ಲೆಯ 6 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 3000 ಕ್ಕೂ ವಿದ್ಯಾರ್ಥಿಗಳಿದ್ದಾರೆ.
28 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 15000 ಮಕ್ಕಳು ಕಲಿಯುತ್ತಿದ್ದಾರೆ. 
ಜಿಲ್ಲೆಯ 246 ಪ್ರೌಢಶಾಲೆಗಳಲ್ಲಿ 25,000 ಕ್ಕೂ ಹೆಚ್ಚು ಮಕ್ಕಳಿದ್ದಾರೆ. 8000 ವಿದ್ಯಾರ್ಥಿಗಳು ಸರ್ಕಾರಿ ಹಾಸ್ಟೆಲ್‌ನಲ್ಲಿದ್ದಾರೆ. ಈ ವರ್ಷ ಹಾಸ್ಟೆಲ್ ಪ್ರವೇಶ ಪಡೆಯಲು 14,000 ಅರ್ಜಿ ಬಂದಿದ್ದು, 6000 ಅರ್ಜಿ ಪೆಂಡಿAಗ್ ಇವೆ.
ಜಿಲ್ಲೆಯಲ್ಲಿ ಒಟ್ಟು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿದ್ದಾರೆ, ಇವರಲ್ಲಿ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಿದ್ದಾರೆ. ಆದರೆ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಸ್ವಾತಂತ್ರ್ಯ ಬಂದು 75 ವರ್ಷ ಆಗಿದ್ದರೂ, ಶಿಕ್ಷಣ ಇಲಾಖೆ ಇಂಥ ದುರದೃಷ್ಟ ಸ್ಥಿತಿಗೆ ತಲುಪಿರುವುದು ಬೇಸರದ ವಿಷಯ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕಣ್ಣೇ ಕಾಣಲ್ಲ. ಶಾಲೆ, ಕಾಲೇಜು ಕಟ್ಟಡ ನಿರ್ಮಾಣ ಮಾಡಲು ರೈಟ್ಸ್ ಕಂಪನಿಗೆ ನೀಡಿದ್ದಾರೆ. ಶೇ. 15 ಪರ್ಸೆಂಟ್ ಕಮೀಷನ್ ಪಡೆಯಲು ರೈಟ್ಸ್ ಕಂಪನಿಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆ ಬಾಗಿಲು ಮುಚ್ಚಿ ಎಂದ ರೇವಣ್ಣ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ ನಡೆಸಿದರು. ಅವನನ್ನು ಮಂತ್ರಿ ಅಂತಾರಾ, ಸಿಎಂ, ಪಿಎಂಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು. ಉನ್ನತ ಶಿಕ್ಷಣ ಸಚಿವ ಅತಿಭ್ರಷ್ಟ ಮಂತ್ರಿ. ಹಾಸ್ಟೆಲ್, ಶಾಲಾ ಕಟ್ಟಡಗಳನ್ನು ಕಟ್ಟಲು ರೈಟ್ಸ್ ಕಂಪನಿ ಹಾಗೂ ಹೌಸಿಂಗ್ ಬೋರ್ಡ್ಗೆ ಕೊಟ್ಟಿದ್ದಾರೆ.
ಲೋಕೋಪಯೋಗಿ ಇಲಾಖೆಯ ಎಸ್‌ಆರ್ ದರಕ್ಕಿಂತ ಶೇ.30ಕ್ಕಿಂತಲೂ ಹೆಚ್ಚು ಹಣವನ್ನು ಈ ಕಂಪೆನಿಗೆ ಪಾವತಿಸಬೇಕಾಗುತ್ತದೆ. ದುಡ್ಡು ಹೊಡೆಯಲು ಬೇಕಾದ ಕಂಪನಿಗೆ ನೀಡಿದ್ದಾರೆ ಎಂದು ದೂರಿದರು.

ಇದನ್ನು ಯಾರಾದ್ರೂ ಸರ್ಕಾರ ಅಂತಾರಾ ಕೆಂಡಾಮಂಡಲರಾದರು.
ಮುಖ್ಯಮಂತ್ರಿಗೆ ಮಾನ, ಮರ್ಯಾದೆ ಇದ್ದರೆ ಶಿಕ್ಷಣ ಮಂತ್ರಿಯನ್ನು ವಜಾ ಮಾಡಬೇಕು. ಇವರ ವಿರುದ್ಧ ಇಲಾಖಾ ತನಿಖೆ ನಡೆಸಿ ಎಂದು ಆಗ್ರಹಿಸಿದರು.
ಬೇರೆಡೆ ಕಡೆ ಏನಾದ್ರೂ ಮಾಡಿಕೊಳ್ಳಲಿ, ಆದರೆ ಬಡವರ ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. 
ಸಿಎಂ, ವ್ಯಾಪಾರ ಮಾಡುವ ಮಂತ್ರಿ ಇಟ್ಟುಕೊಂಡಿದ್ದೀರಿ, ಇಂಥ ನಾಲಾಯಕ್ ಮಂತ್ರಿ, ಲೂಟಿಕೋರರನ್ನು ಹದಮಾಡಿ ಎಂದು ಮನವಿ ಮಾಡಿದರು.
ಯಡಿಯೂರಪ್ಪ 150 ಸೀಟ್ ಬರಲಿದೆ ಅಂತಾರೆ, ಆದರೆ ಇಂತಹವರನ್ನು ಇಟ್ಟುಕೊಂಡರೆ ಅಧಿಕಾರಕ್ಕೆ ಬರಲ್ಲ ಎಂದು ಭವಿಷ್ಯ ನುಡಿದರು. 
ದೇವೇಗೌಡರು ಮತ್ತು ನಾನು ಮೂರು ಕಿಮೀಗೆ ಒಂದು ಹೈಸ್ಕೂಲ್, ಪಿಯು ಕಾಲೇಜು ಮಾಡಿದ್ದೇವೆ. ಆದರೆ ಶಿಕ್ಷಣ ಇಲಾಖೆಯಲ್ಲೂ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಗುಡುಗಿದರು.

Post a Comment

Previous Post Next Post