ಹೇಮಾವತಿ ಹೊಳೆಯಲ್ಲಿ ಶವ ಪತ್ತೆ

ದಿನಾಂಕ : 23-07-2022 ರಂದು ಮದ್ಯಾಹ್ನ 3-00 ಗಂಟೆಯಲ್ಲಿ ಶ್ರೀ ಮಹೇಶ್ ಬಿನ್ ಕೃಷ್ಣಪ್ಪ , ತಾರೀಖ್ ಬಯಲು , ಗ್ರಾಮ ಯಸಳೂರು ಹೋಬಳಿ , ಸಕಲೇಶಪುರ ತಾಲ್ಲೋಕು ರವರು ಠಾಣೆಗೆ ಹಾಜರಾಗಿ , ತನ್ನ ತಮ್ಮ ಆನಂದ , 41 ವರ್ಷ , ರವರು ದಿ : 20-07-2022 ರಂದು ಸಂಜೆ 6-00 ಗಂಟೆಯಿಂದ ಕಾಣೆಯಾಗಿರುತ್ತಾರೆಂದು ನೀಡಿದ ದೂರನ್ನು ಪಡೆದು ತನಿಖೆ ಕೈಗೊಂಡಿದ್ದು , ತನಿಖಾ ಕಾಲದಲ್ಲಿ ಮಹೇಶರವರು ತಮ್ಮ ಗ್ರಾಮದ 1 ) ಟಿ ಡಿ ದಿನೇಶ ಬಿನ್ ದೇವರಾಜು , 26 ವರ್ಷ , ಗಂಗಮತ ಜನಾಂಗ , ತಾರಿಕ್ ಬಯಲು ಗ್ರಾಮ , ಯಸಳೂರು ಹೋಬಳಿ , ಸಕಲೇಶಪುರ ತಾಲ್ಲೂಕು ಮತ್ತು ಹೇಮರಾಜು ಬಿನ್ ದೇವರಾಜು , 24 ವರ್ಷ , ಗಂಗಮತ ಜನಾಂಗ , ತಾರಿಕ್ ಬಯಲು ಗ್ರಾಮ , ಯಸಳೂರು ಹೋಬಳಿ , ಸಕಲೇಶಪುರ ತಾಲ್ಲೂಕು ರವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಮೇರೆಗೆ ಸದರಿಯವರನ್ನು ವಿಚಾರಣೆ ಮಾಡಿದಾಗ , ಆರೋಪಿಗಳು ಮೃತ ಆನಂದನೊಂದಿಗೆ ದಿ : 20-07-2022 ರಂದು ರಾತ್ರಿ ತಮ್ಮ ಮನೆಯ ಬಳಿ ಕುಡಿದು ಜಗಳ ಮಾಡಿಕೊಂಡು , ಆರೋಪಿಗಳು ಮೃತನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದು , ನಂತರ ಮೃತದೇಹವನ್ನು ಗೋಣಿಚೀಲದಲ್ಲಿ ಸುತ್ತಿಕೊಂಡು ಆಲೂರು ತಾಲ್ಲೂಕು , ಶಿರಗಾವರ ಗ್ರಾಮದ ಸೇತುವೆಯ ಬಳಿ ಹೇಮವಾತಿ ಹೊಳೆಗೆ ಹಾಕಿರುವುದಾಗಿ ತಿಳಿದ್ದರ ಮೇರೆಗೆ ಸಕಲೇಶಪುರ ಅಗ್ನಿಶಾಮಕ ತಂಡದವರ ಸಹಾಯದಿಂದ ಮೃತದೇಹವನ್ನು ಹೇಮಾವತಿ ಹೊಳೆಯಿಂದ ಹೊರಗೆ ತೆಗೆದು ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ .

Post a Comment

Previous Post Next Post