ಕಳಪೆ ರಸಗೊಬ್ಬರ ಪೂರೈಕೆ ವಿರುದ್ಧ ಶಿಸ್ತು ಕ್ರಮ: ಕೃಷಿ ನಿರ್ದೇಶಕರಿಂದ ಎಚ್ಚರಿಕೆ

ಫಸಲ್ ಭೀಮಾ ಯೋಜನೆ ಸದುಪಯೋಗಕ್ಕೆ ಮನವಿ

ಹಾಸನ : ಜಿಲ್ಲೆಯಲ್ಲಿ ರೈತರಿಗೆ ರಸಗೊಬ್ಬರ ಹಾಗೂ ಬಿತ್ತನೆ ಬೀಜ ಪೂರೈಕೆಗೆ ಅಗತ್ಯ ಕ್ರಮ ಕೈಗೊಂಡಿದ್ದು ಕೃತಕ ಅಭಾವ ಸೃಷ್ಟಿಸಿ ಕಳಪೆ  ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರಾದ ರವಿ ತಿಳಿಸಿದರು .

ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮುಂಗಾರು ಫಲಪ್ರದವಾಗಿದ್ದು ವಾಡಿಕೆ ಗಿಂತ 54% ಹೆಚ್ಚುವರಿ ಮಳೆಯಾಗಿದೆ . ಈಗಾಗಲೇ  ರೈತರಿಗೆ ಅಗತ್ಯ ಬಿತ್ತನೆ ಬೀಜ ಹಾಗೂ ಗೊಬ್ಬರ ಪೂರೈಕೆ ಮಾಡುವ ನಿಟ್ಟಿನಲ್ಲಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಹಾಗೂ ತಾಲ್ಲೂಕು ಗುದಾಮಗಳಲ್ಲಿ ದಾಸ್ತಾನು ಮಾಡಲಾಗಿದ್ದು ರೈತರಿಗೆ ವಿತರಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಖಾಸಗಿ ಗೊಬ್ಬರ ಅಂಗಡಿ ಮಾಲೀಕರು ಗೊಬ್ಬರ ಅಭಾವ ಸೃಷ್ಟಿಸಿ ಕಳಪೆ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,  ಈಗಾಗಲೇ ಕಳಪೆ ಗೊಬ್ಬರ ಪೂರೈಕೆ ಸಂಬಂಧ ಅರಕಲಗೂಡಿನಲ್ಲಿ ಒಂದು ಪ್ರಕರಣ ದಾಖಲಿಸಲಾಗಿದ್ದು , 

ಜಿಲ್ಲೆಯಲ್ಲಿ ಇದುವರೆಗೆ ಕಳಪೆ ಗೊಬ್ಬರ ಪೂರೈಕೆ ಹಿನ್ನೆಲೆ 12 ಗೊಬ್ಬರ ಮಾರಾಟ ಲೈಸೆನ್ಸ್ ರದ್ದು ಮಾಡಲಾಗಿದೆ ಎರಡು ಕೀಟನಾಶಕ ಮಾರಾಟ ಅಂಗಡಿ ಲೈಸೆನ್ಸ್ ರದ್ದು ಮಾಡಿದ್ದು ಬಿತ್ತನೆ ಬೀಜ ಮಾರಾಟಗಾರರ ಮೂರು ಅಂಗಡಿಯ ಲೈಸೆನ್ಸ್  ರದ್ದು ಮಾಡಿ ಆದೇಶ ನೀಡಲಾಗಿದೆ ಎಂದು ತಿಳಿಸಿದರು.

 ಜಿಲ್ಲೆಯಲ್ಲಿ ಅತಿವೃಷ್ಟಿ ಅನಾವೃಷ್ಟಿ ಹಿನ್ನೆಲೆಯಲ್ಲಿ ಬೆಳೆ ಹಾನಿ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಫಸಲ್ ಭೀಮಾ ಯೋಜನೆಯನ್ನು ಜಾರಿ ತಂದಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ, ಮನವಿ ಮಾಡಿದರು .
 
ಈಗಾಗಲೇ ಜಿಲ್ಲೆಯ ಹೊಳೆನರಸೀಪುರ, ಅರಕಲಗೂಡು ಹಾಸನ ತಾಲೂಕಿನಲ್ಲಿ 534 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು ಈಗಾಗಲೇ 39 ಲಕ್ಷ ಪರಿಹಾರವನ್ನು ವಿತರಣೆಗೆ ಕ್ರಮವಹಿಸಲಾಗಿದೆ.
 
ರೈತರು ಬೆಳೆ ವಿಮೆ ಪಾವತಿಗೆ ಜೋಳಕ್ಕೆ ಜುಲೈ ೩೧ ಕಡೆ ದಿನ ವಾಗಿದೆ, ರಾಗಿ ವಿಮೆ ಪ್ರೀಮಿಯಂ ಪಾವತಿಗೆ ಆಗಸ್ಟ್ 16 ಕಡೆಯ ದಿನಾಂಕವಾಗಿದೆ. ಕೇವಲ ಶೇಕಡ ೨ರಷ್ಟು ವಿಮಾ ಕಂತನ್ನು ಕಟ್ಟಿ ವಿಮೆ ಪರಿಹಾರ ಪಡೆಯಬಹುದಾಗಿದ್ದು ರೈತರು ಇದರ ಉಪಯೋಗ ಪಡೆಯುವಂತೆ ಮನವಿ ಮಾಡಿದರು .

Post a Comment

Previous Post Next Post