ಉದ್ದೇಶಪೂರ್ವಕವಾಗಿ ಕಾಮಗಾರಿ ಸ್ಥಗಿತ: ಸದಸ್ಯ ಆರೋಪ

ಬೇಲೂರು : ಪುರಸಭಾ ೧೨ ನೇ ವಾರ್ಡಿನಲ್ಲಿ ಗುದ್ದಲಿಪೂಜೆ ನಡೆಸಿದ ರೂ ೧೦ ಲಕ್ಷ ಕಾಮಗಾರಿಯನ್ನು ಇಲ್ಲಿನ ಪುರಸಭಾ ಆಡಳಿತ ಉದ್ದೇಶಪೂರ್ವಕವಾಗಿ ಸ್ಥಗೀತ ಮಾಡಿದ್ದಾರೆಂದು ಸದಸ್ಯ ಅಶೋಕ್ ದೂರಿದರು.

ಪುರಸಭಾ ಅಧ್ಯಕ್ಷ ಸಿಎನ್.ದಾನಿ ಅಶೋಕ್, ಕಾಮಗಾರಿ ಸ್ಥಗಿತದ ಜೊತೆಗೆ   ಪುರಸಭಾ ವಾಣಿಜ್ಯ ಮಳಿಗೆಗಳ ಮಧ್ಯದ ಗೋಡೆಗಳನ್ನು ನಿಯಮ ಭಾಹಿರವಾಗಿ ಒಡೆದು ವಿರೂಪಗೊಳಿಸಲು ಅಧ್ಯಕ್ಷರು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿ  ಸ್ವಪಕ್ಷೀಯ ಅಧ್ಯಕ್ಷರ ವಿರುದ್ಧವೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಒಂದು ಹಂತದಲ್ಲಿ ಅಂಗಿಯನ್ನು ಕಳಚಿ ಘೋಷಣೆ ಕೂಗಿದ ಘಟನೆಯೂ ಜರುಗಿತು.
ಸಭೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಸದಸ್ಯ ಆಶೋಕ್, ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪುರಸಭೆಯಲ್ಲಿ ಕೆಲವರ ಹಿಡಿತವೇ ಹೆಚ್ಚಾಗಿದೆ ಎಂದು ಆರೋಪಿಸಿದ ಸದಸ್ಯ ಅಶೋಕ್ ಹಾಗೂ ಸದಸ್ಯ ಶಾಂತಕುಮಾರ್ ನಡುವೆ ಮಾತಿನ ಚಕಮುಖಿ ಕಾರಣವಾಯಿತು. ಶಾಂತಿ ಕಾಪಾಡಬೇಕು, ಇಲ್ಲವಾದರೆ ಸಭೆಯಿಂದ ಹೊರ ಕಳಿಸಲಾಗುತ್ತದೆ ಎಂದಾಗ ಕೋಪಗೊಂಡ ಸದಸ್ಯ ಆಶೋಕ್, ತಾಕತ್ತಿದ್ದರೆ ನನ್ನನ್ನು ಹೊರ ಕಳಿಸಿ ಎಂದು ಅಧ್ಯಕ್ಷರ ಬಳಿ ಆಗಮಿಸಿ ವಾದಕ್ಕೆ ಇಳಿದರು. ಸದಸ್ಯ ಜಗದೀಶ್, ಅಕ್ರಮಪಾಷ, ಶ್ರೀನಿವಾಸ್, ಭರತ್ ಇತರರು ಪರಿಸ್ಥಿತಿ ತಿಳಿಗೊಳಿಸಿದರು.
ಸದಸ್ಯ ಬಿ.ಗಿರೀಶ್ ಮಾತನಾಡಿ, ಪುರಸಭಾ ಕಾಯಿದೆ ಪ್ರಕಾರ ಮಾಸಿಕ ಸಭೆಗಳನ್ನು ನಡೆಸಲು ಪುರಸಭೆ ವೈಪಲ್ಯ ಹೊಂದಿದೆ. ಸದಸ್ಯರ ಹೇಳಿಕೆ ದಾಖಲೆಯನ್ನು ಮಾಡುತ್ತಿಲ್ಲ, ಸಾರ್ವಜನಿಕರಿಗೆ ಕಂದಾಯ ದಾಖಲೆ ಸೇರಿದಂತೆ ಇ-ಸ್ವತ್ತು ಸಕಾಲಕ್ಕೆ ದೊರೆಯುತ್ತಿಲ್ಲ. ಪಟ್ಟಣದ ನಿವಾಸಿಗಳು ತಮ್ಮ ಕಷ್ಟಗಳನ್ನು ಹೇಳಲು ಮುಖ್ಯಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿಲ್ಲ ಎಂದು ತಮ್ಮ ಬೇಸರ ವ್ಯಕ್ತ ಪಡಿಸಿದರು. ಸದಸ್ಯ ಜಗದೀಶ್ ಮಾತನಾಡಿ, ಕಾಮಗಾರಿ ನಡೆದೆ ಗುತ್ತಿಗೆ ಹಣ ಪಾವತಿಯಾಗಿದೆ. ಪುರಸಭಾ ಎಲ್ಲಾ ಕಾಮಗಾರಿಗಳು ವಿನೋಧ ಎಂಬ ವ್ಯಕ್ತಿಗೆ ಗುತ್ತಿಗೆಗೆ ಒಳಪಟ್ಟಿದೆ ಎಂದರೆ ಇದರ ಹಿಂದೆ ಅನುಮಾನ ಕಾಡುತ್ತಿದೆ. ಶಾಸಕರು ಇಲ್ಲಿಯತನಕ ಯಾವ ಅನುದಾನವನ್ನು ಹೈಜಾಕ್ ಮಾಡಿ ಜೆಡಿಎಸ್ ಸದಸ್ಯರಿಗೆ ನೀಡಿಲ್ಲ. ಕಾಂಗ್ರೆಸ್ ಸದಸ್ಯರಿಗೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ ಈ ಬಗ್ಗೆ ದಾಖಲೆ ಇದೆ ವಿನಾಃ ಕಾರಣ ಶಾಸಕರ ಬಗ್ಗೆ ಮಾತು ಬೇಡವೆಂದರು.

ಕೋವಿಡ್ ಹಾಗೂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮಾಸಿಕ ಸಭೆ ನಡೆಸಲು ಸಾದ್ಯವಾಗಿಲ್ಲ, ಅಲ್ಲದೆ ೧೨ ನೇ ವಾರ್ಡ್ ಕಾಮಗಾರಿ ಸ್ಥಗೀತಕ್ಕೆ ಅಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ. ಇಂದಿನ ಸಾಮಾನ್ಯಸಭೆಯಲ್ಲಿ ಕೆಲ ಸದಸ್ಯರು ಉದ್ದೇಶಪೂರ್ವಕವಾಗಿಯೇ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಸಿ.ಎನ್.ದಾನಿ, ಉಪಾಧ್ಯಕ್ಷೆ ಸಬಾಕೌಸರ್ ಹಾಗೂ ಮುಖ್ಯಾಧಿಕಾರಿ ಸುಜಯಕುಮಾರ್ ಹಾಜರಿದ್ದರು.

Post a Comment

Previous Post Next Post