ಅರಕಲಗೂಡು :- ಜನರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರಾಜಕೀಯ ಮಾಡದೆ ಕ್ಷೇತ್ರದ ಮುಖಂಡರು ಜನರಿಗೆ ಪಕ್ಷಾತೀತವಾಗಿ ಸಹಾಯ ಮಾಡಬೇಕು ಎಂದು ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ಶ್ರೀಧರ್ ಗೌಡ ಹೇಳಿದ್ದಾರೆ .
ತಾಲೂಕಿನಾದ್ಯಂತ ಅತಿಯಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೊಣನೂರು ಹೋಬಳಿಯ ತರಿಗಳಲೆ ಗ್ರಾಮದಲ್ಲಿ 25ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು ಅನೇಕ ಮನೆಗಳಲ್ಲಿ ಈಗಲೂ ಸಹ ಜನರು ವಾಸವಿದ್ದ ಕುಟುಂಬದ ಬಗ್ಗೆ ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ಶ್ರೀಧರ್ ಗೌಡ ಇಂದು ಭೇಟಿ ಮಾಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಎಸ್.ಜಿ. ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀಧರ್ ಗೌಡ ಅಭಿಮಾನಿ ಬಳಗದ ವತಿಯಿಂದ ಮನೆ ಕಳೆದುಕೊಂಡವರಿಗೆ ಧನ ಸಹಾಯ ಮಾಡಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬದವರಿಗೆ ಸರ್ಕಾರದಿಂದ ಸೌಲಭ್ಯ ಸಿಗುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತಕ್ಷಣವೇ ತಾಲ್ಲೂಕು ಆಡಳಿತಕ್ಕೆ ಮಾಹಿತಿ ಕೊಡಬೇಕು ಎಂದರು .
ಈ ಸಂದರ್ಭದಲ್ಲಿ ಕೊಣನೂರು ಹೋಬಳಿಯ ಕಂದಾಯ ನಿರೀಕ್ಷಕರಾದ ಮಂಜುನಾಥ್ ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ದಶರಥರವರು, ಕುರಿ ಮತ್ತು ಉಣ್ಣೆ ನಿಗಮದ ಸದಸ್ಯರಾದ ಎಲ್.ಬಿ. ಕೃಷ್ಣರವರು, ಗ್ರಾ.ಪಂ. ಸದಸ್ಯರಾದ ದ್ವಾರಕನಾಥ್ ರವರು, ಕಬ್ಬಳಿಗೆರೆ ಸೋಮಶೇಖರ್ ರವರು,ಕಟ್ಟೆಪುರ ಈಶ್ವರ್ ರವರು, ಎ.ಬಿ. ಶೇಖರ್ ರವರು, ಕರಾವೇ ಅದ್ಯಕ್ಷರಾದ ಸೋಮಶೇಖರ್, ವಿ.ಎಸ್.ಎಸ್.ಎನ್. ನಿರ್ದೇಶಕರಾದ ಪ್ರಸನ್ನ ಸೇರಿದಂತೆ ಇತರರು ಹಾಜರಿದ್ದರು .
Tags
ಅರಕಲಗೂಡು