ಶೀಘ್ರದಲ್ಲೇ 62ಮನೆಗಳ ನಿರ್ಮಾಣ ಮಾಡಿ ಮನೆ ರಹಿತ ಕುಟುಂಬಗಳಿಗೆ ಹಂಚಿಕೆ : ಶಾಸಕ ಪ್ರೀತಂ ಗೌಡ

ಹಾಸನ :-ಅತಿಯಾದ ಮಳೆಯ ಕಾರಣದಿಂದಾಗಿ ನಗರವ್ಯಾಪ್ತಿಯಲ್ಲಿ ಹಾನಿಗೀಡಾಗಿರುವ ಅಥವಾ ಈಗಾಗಲೇ ಬೀಳುವ ಹಂತದಲ್ಲಿರುವ 62 ಕುಟುಂಬಗಳಿಗೆ ಸ್ಲಂ ಬೋರ್ಡ್ ವತಿಯಿಂದ ಶೀಘ್ರವಾಗಿ ಮನೆ ನಿರ್ಮಾಣ ಮಾಡಿ ವಸತಿ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕರಾದ ಪ್ರೀತಂ ಜೆ ಗೌಡ ಹೇಳಿದ್ದಾರೆ .
ನಗರದ ಪೆನ್ ಷನ್ ಮೊಹಲ್ಲಾ ಮೊನಚಿ ಕಾಲೊನಿಗೆ ಶನಿವಾರ ಭೇಟಿ ನೀಡಿ ಮನೆ ಮಳೆಯಿಂದ ಹಾನಿಗೀಡಾದ ಮನೆಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಮಳೆಯಿಂದಾಗಿ ಈ ಭಾಗದಲ್ಲಿ ಹಲವಾರು ಮನೆಗಳಿಗೆ ಹಾನಿಯಾದ ವಿಷಯವನ್ನು ತಿಳಿದು  ಇಂದು ಖುದ್ದು ಪರಿಶೀಲನೆಗೆ ನಾನೇ ಬಂದಿದ್ದೇನೆ ಮನೆ ಕಳೆದುಕೊಂಡ ಕುಟುಂಬಗಳಿಗೆ ಸುರಕ್ಷತಾ ಕ್ರಮವಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಮನೆ ಶಿಥಿಲಗೊಂಡಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಅಂತಹ ಕುಟುಂಬಗಳಿಗೆ ಶೀಘ್ರದಲ್ಲೇ ಮನೆ ನಿರ್ಮಾಣ ಮಾಡಿಕೊಡಲು ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡುತ್ತೇನೆ ಎಂದರು .
ಈ ಸಂದರ್ಭದಲ್ಲಿ ತಹಶೀಲ್ದಾರ್ ನಟೇಶ್ ನಗರಸಭಾ ಅಧ್ಯಕ್ಷರಾದ ಮೋಹನ್ ಆಯುಕ್ತರಾದ ಪರಮೇಶ್ವರಪ್ಪ ಹಾಗೂ ನಿವಾಸಿಗಳು ಹಾಜರಿದ್ದರು

Post a Comment

Previous Post Next Post