ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಜಾವಗಲ್ ನೇಮತ್ ಹಾಗೂ ಬ್ಲಾಕ್ ಉಪಾಧ್ಯಕ್ಷರಾಗಿ ಜಾವಗಲ್ ಶಕೀಲ್ ನೇಮಕ

ಜಾವಗಲ್:ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಜಾವಗಲ್ ನೇಮತ್  ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಜಾವಗಲ್ ಶಕೀಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು ತಿಳಿಸಿದರು.
 ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಹಮ್ಮದ್ ನಲಪಾಡ್ ಅವರ ಆದೇಶದ ಮೇರೆಗೆ ಇವರನ್ನು ನೇಮಕ ಮಾಡಲಾಗಿದೆ. ವಹಿಸಿರುವ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಹೋಗಿ. ಯುವ ಕಾಂಗ್ರೆಸ್ ಬಲಪಡಿಸಲು ಎಲ್ಲಾ ರೀತಿಯಲ್ಲಿ ಶ್ರಮಿಸಬೇಕಾಗಿದೆ ಎಂದರು.
   ನೂತನ ಪದಾಧಿಕಾರಿಗಳಿಗೆ ಕಾಂಗ್ರೆಸ್ ಮುಖಂಡರಾದ ಗ್ರಾನೈಟ್ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿರೂಪಾಕ್ಷ ಅಭಿನಂದಿಸಿದ್ದಾರೆ.

Post a Comment

Previous Post Next Post