ನಾನು ಜನತೆಗೆ ಮೋಸ ಮಾಡಿಲ್ಲ ರಾಗಿ ಕದ್ದಿಲ್ಲ ಆಣೆ ಪ್ರಮಾಣ ಮಾಡಿದ ಶಾಸಕ ಕೆ.ಎಂ .ಶಿವಲಿಂಗೇಗೌಡ

ಅರಸೀಕೆರೆ :- ಕ್ಷೇತ್ರದ ಶಾಸಕ ಶಿವಲಿಂಗೇಗೌಡ ರಾಗಿ ಕಳ್ಳ’ ಎಂದು  ಬಿಜೆಪಿ ಮುಖಂಡರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಇಂದು  ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಆಗಮಿಸಿದ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಆಣೆ ಪ್ರಮಾಣ ಮಾಡಿದ್ದಾರೆ.
ಶಿವಲಿಂಗೇಗೌಡ ‘ರಾಗಿ ಕಳ್ಳ’ ಎಂದು ಬಿಜೆಪಿ ಮುಖಂಡರು  ಅರಸೀಕೆರೆ ಆಣೆ ಧರ್ಮಸ್ಥಳ ಆರೋಪ ಮಾಡಿದ್ದರು.‌ ಈ ಆರೋಪಕ್ಕೆ ಧರ್ಮಸ್ಥಳ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡುವುದಾಗಿ ಶಿವಲಿಂಗೇ ಗೌಡ ಹೇಳಿಕೆ ನೀಡಿದ್ದರು.ಅದರಂತೆ ಧರ್ಮಸ್ಥಳಕ್ಕೆ ಆಗಮಿಸಿದ ಅವರು ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ನಾನ ಮಾಡಿದ ನಂತರ ಡಾ.ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದರು. ಬಳಿಕ ಶ್ರೀ  ಮಂಜುನಾಥನ ಮುಂದೆ ಆಣೆ ಪ್ರಮಾಣ ಮಾಡಿದ್ರು.  ಈ ವೇಳೆ ಶಾಸಕ ಶಿವಲಿಂಗೇಗೌಡರ ಜೊತೆ 100 ಕ್ಕೂ ಅಧಿಕ ಬೆಂಬಲಿಗರು ಜೊತೆಗಿದ್ದರು.

Post a Comment

Previous Post Next Post