ರಮೇಶ್ ಅರವಿಂದ್ ಜೊತೆಯಾದ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್


2020ರಲ್ಲಿ ತೆರೆ ಕಂಡ ಶಿವಾಜಿ ಸುರತ್ಕಲ್ ಚಿತ್ರದ ಮುಂದಿನ ಸರಣಿ, ಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನ ಗಾಂವ್ಕರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಯುವ ಮಹಿಳಾ ಪೊಲೀಸ್ ಅಧಿಕಾರಿಗಳ ಬಗ್ಗೆ ವಿವರವಾಗಿ ಅಧ್ಯಯನ ನಡೆಸಿ ನಿರ್ದೇಶಕರು ಈ ಪಾತ್ರವನ್ನು ಸೃಷ್ಟಿಸಿದ್ದಾರೆ, ವಿಶೇಷವೇನೆಂದರೆ ನಿಜ ಜೀವನದಲ್ಲಿ ಮೇಘನವರ ತಂದೆ ಕೂಡ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದು, ಈ ಪಾತ್ರದ ತಯಾರಿಗೆ ಮತ್ತಷ್ಟು ಸಹಕಾರಿಯಾಯಿತು. ಇನ್ನು ಚಿತ್ರದಲ್ಲಿ ಮೇಘನಾ ಅವರದ್ದು ಶಿವಾಜಿಯ ಮೇಲಧಿಕಾರಿಯ ಪಾತ್ರವಾಗಿದ್ದು, ತನಿಖೆಯ ಪ್ರತಿ ಹಂತದಲ್ಲೂ ಶಿವಾಜಿಯ ಜೊತೆಗಿದ್ದು ಚಿತ್ರಕ್ಕೆ ನಿಜವಾದ ಪೊಲೀಸ್ ಪವರ್ ಸಿಗುವಂತೆ ಮಾಡಿದ್ದಾರೆ.
ಇನ್ನು ಶಿವಾಜಿ ಸುರತ್ಕಲ್-2 ಚಿತ್ರತಂಡವು ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬದ ದಿನ ಸೆಪ್ಟೆಂಬರ್ 10 ರಂದು ಟೀಸರ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಡಬ್ಬಿಂಗ್ ಕೆಲಸಗಳು ಶುರುವಾಗಿದೆ. 
ಚಿತ್ರಕ್ಕೆ ಜೂಡ ಸ್ಯಾಂಡಿರವರ ಸಂಗೀತ ಮತ್ತು  ದರ್ಶನ್ ಅಂಬಟ್, ಗುರು ಪ್ರಸಾದ್ ಎಂ ಜಿ  ಛಾಯಾಗ್ರಹಣವಿದ್ದು, ಅಂಜನಾದ್ರಿ ಸಿನಿ ಕ್ರಿಯೇಶನ್ಸ್ ನಲ್ಲಿ ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆಕಾಶ್ ಶ್ರೀವತ್ಸರವರು ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Post a Comment

Previous Post Next Post