ಹರ್ ಘರ್ ತಿರಂಗ : ಬಿಜೆಪಿಯಿಂದ ಜವಾಬ್ದಾರಿ ಹಂಚಿಕೆ

ಹರ್ ಘರ್ ತಿರಂಗ ಕಾರ್ಯಕ್ರಮವನ್ನು ಸಕಲೇಶಪುರ ತಾಲೂಕಿನಲ್ಲಿ ಯಶಸ್ವಿಯಾಗಿ ಮಾಡುವ ನಿಟ್ಟಿನಲ್ಲಿ ತಾಲೂಕು ಬಿಜೆಪಿ ಪಧಾಧಿಕಾರಿಗಳ ಸಭೆಯು ಇಂದು ಶನಿವಾರ ನಡೆಯಿತು.


ಮಾಜಿ ಶಾಸಕ ಹೆಚ್. ಎನ್. ವಿಶ್ವನಾಥ್, ಬಿಜೆಪಿ ಮುಖಂಡ ನಾರ್ವೆ ಸೋಮಶೇಖರ್, ಬಿಜೆಪಿ ಅಧ್ಯಕ್ಷ ಮಂಜುನಾಥ್ ಸಂಘಿ, ಮಾಜಿ ತಾ. ಪಂ ಸದಸ್ಯ ಸಿಮೆಂಟ್ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಂದೇಶ್ ಹಾಗೂ ಲೋಕೇಶ್ ಎಲ್ಲಾ ಮೋರ್ಚಾಗಳ ಅಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರದ ಪ್ರಮುಖರು, ಮಹಾ ಶಕ್ತಿ ಕೇಂದ್ರದ ಪ್ರಮುಖರು, ಮಂಡಲ ಪದಾಧಿಕಾರಿಗಳು, ಇನ್ನಿತರ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

ಈ ಸಂದರ್ಭದಲ್ಲಿ ವಿವಿಧ ಮೋರ್ಚಾಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು.

🌹ರೈತ ಮೋರ್ಚಾ ಹಾಗೂ ಹಿಂದುಳಿದ ವರ್ಗಗಳ ಮೋರ್ಚಾವು ಎತ್ತಿನ ಗಾಡಿ ಅಥವಾ ಟ್ರ್ಯಾಕ್ಟರ್ ನಲ್ಲಿ ಅಲಂಕಾರ ಮಾಡಿ ಜಾಗೃತಿ ಮೂಡಿಸುವಂತೆ ನಿರ್ಧಾರ ಮಾಡಲಾಯಿತು.

🌹ಯುವ ಮೋರ್ಚಾ ಹಾಗೂ ಎಸ್ ಸಿ ಮೋರ್ಚಾವು ಬೈಕ್ ರಾಲಿ ಮೂಲಕ ಸಾಮಾಜಿಕ ಜಾಗೃತಿ ಮಾಡುವಂತೆ ತಿಳಿಸಲಾಯಿತು.

🌹ಮಹಿಳಾ ಮೋರ್ಚಾ ಹಾಗೂ ಅಲ್ಪ ಸಂಖ್ಯಾತ ಮೋರ್ಚಾವು ರಾಷ್ಟ್ರೀಯ ನಾಯಕರ ಪುತ್ತಳಿ ಸ್ವಚ್ಛತೆ ಮಾಡುವಂತೆ ನಿರ್ಧಾರ ಮಾಡಲಾಯಿತು.

ದೇಶಕ್ಕೆ ಈ ವರ್ಷ 75 ನೇ ಸ್ವಾತಂತ್ರ್ಯ. ಈ ವಿಚಾರವನ್ನು ಪ್ರತಿ ಮನೆಗೂ ತಲುಪುವಂತೆ ಮಾಡುವುದು ಬಿಜೆಪಿ ಪಕ್ಷದ ನಿರ್ಧಾರ ಎಂದು ತಿಳಿದು ಬಂದಿದೆ

Post a Comment

Previous Post Next Post