ಹೊಳೆ ಮಲ್ಲೇಶ್ವರ ದೇವಾಲಯ ಜಲಾವೃತವಾಗುವ ಸಾಧ್ಯತೆ ..

ಸಕಲೇಶಪುರ :- ತಾಲ್ಲೂಕಿನಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಪಟ್ಟಣದ ಹೊಳೆಮಲ್ಲೇಶ್ವರ ದೇವಾಲಯವು ಹೇಮಾವತಿ ಜಲಾಶಯದ ಹಿನ್ನೀರಿನಿಂದ ಜಲಾವೃತವಾಗುವ ಸಾಧ್ಯತೆ ಇದೆ .
ಕಳೆದ 4ದಿನಗಳಿಂದ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೇಮಾವತಿ ಜಲಾಶಯದ ಹಿನ್ನೀರು ಹೊಳೆಮಲ್ಲೇಶ್ವರ ದೇವಾಲಯದ ಮುಂಭಾಗದ ಮೆಟ್ಟಿಲುಗಳು ಬಳಿಗೆ ಬಂದಿದ್ದು ಇನ್ನೂ ಕೆಲವು ಗಂಟೆಗಳು ಮಳೆ ಇದೇ ರೀತಿ ಮುಂದುವರಿದರೆ ದೇವಾಲಯವು ಜಲಾವೃತವಾಗುವ ಸಾಧ್ಯತೆಯಿದೆ .ಹಾಗೂ ನದಿಯ ಆಸು ಪಾಸಿನಲ್ಲಿರುವ ಪಟ್ಟಣದ ಆಜಾದ್ ರಸ್ತೆ ಸೇರಿದಂತೆ ಪಟ್ಟಣದ ಹಲವು ಭಾಗಗಳು ಈಗಾಗಲೇ ನೀರಿನಿಂದ ಮುಳುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರವಾಹ ಹೆಚ್ಚಾಗುವ ಸಾಧ್ಯತೆಯಿದೆ .

ಪಟ್ಟಣದಲ್ಲಿ ನದಿಯ ಆಸುಪಾಸಿನಲ್ಲಿ ವಾಸಿಸುತ್ತಿರುವ ಜನತೆ ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ  ತೆರಳುವಂತೆ ತಾಲ್ಲೂಕು ಆಡಳಿತ ಈಗಾಗಲೇ ಸೂಚನೆ ನೀಡಿದೆ .

Post a Comment

Previous Post Next Post