ಅರಕಲಗೂಡು :- ತಾಲ್ಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ತಾಲೂಕಿನ ಕೊಣನೂರು ಕೆರೆಯ ಎರಿಯ ಮೇಲಿನ ರಸ್ತೆ ಬಿರುಕು ಬಿಟ್ಟಿದ್ದು ಜನತೆ ಭಯ ಪಡುವ ಅಗತ್ಯವಿಲ್ಲ ಎಂದು ಕ್ಷೇತ್ರ ಶಾಸಕರಾದ ಎ ಟಿ ರಾಮಸ್ವಾಮಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಜನತೆಗೆ ಸ್ಪಷ್ಟನೆ ನೀಡಿದ್ದಾರೆ.
ಶಾಸಕರ ಸ್ಪಷ್ಟನೆ : ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ - ಕೊಣನೂರು ರಸ್ತೆ ಕಾಮಗಾರಿ ಆಗಿ ಮೂರು ವರ್ಷ ಕಳೆದಿದೆ. 20 ಕಿಮೀ ಉದ್ದ ಇರುವ ಈ ರಸ್ತೆಯು ಕೊಣನೂರಿನ ಕೆರೆ ಏರಿ ಮೇಲೆ ಸಾಗಿ ಪಟ್ಟಣ ಸೇರುತ್ತದೆ. ಈ ವರ್ಷ ಅತಿಯಾದ ಮಳೆಯಿಂದ ಶೀತಲವಾಗಿ ಕೆರೆ ಏರಿಯ ಕೆಲವೊಂದು ಕಡೆ ರಸ್ತೆ ಬಿರುಕು ಬಿಟ್ಟಿದೆ.ರಸ್ತೆ ಕಳಪೆಯಾಗಿದೆ ಹಾಗೂ ಕೆರೆ ಏರಿಯೇ ಒಡೆದು ಹೋಗುತ್ತಿದೆ ಎಂದು ಕೆಲವರು ಈ ಪರಿಸ್ಥಿತಿಯನ್ನ ರಾಜಕೀಯಕ್ಕಾಗಿ ಬಳಸಿಕೊಂಡು ಸುಳ್ಳು ಸುದ್ದಿಗಳನ್ನ ಹಬ್ಬಿಸುತ್ತಿದ್ದು ಸಾರ್ವಜನಿಕರು ಆತಂಕ ಪಡುವಂತೆ ಮಾಡುತ್ತಿದ್ದಾರೆ.
ಅರಕಲಗೂಡು ತಾಲೂಕಿನಾದ್ಯಂತ ಅತಿ ಹೆಚ್ಚು ಮಳೆಯಾಗುತ್ತಿದ್ದು ಈ ಸಂದರ್ಭದಲ್ಲಿ ಸಾರ್ವಜನಿಕರು ಸಂಯಮ ಕಾಯ್ದುಕೊಂಡು ಯಾವುದೇ ಕಿಡಿಗೇಡಿಗಳ ಸುದ್ದಿಗಳಿಗೆ ಆತಂಕ ಪಡಬಾರದು.ಪ್ರಕೃತಿ ವಿಕೋಪಕ್ಕೆ ಹಾನಿಗಳು ಸಂಭವಿಸುತ್ತಿರುವಾಗ ಎಲ್ಲರ ಸಹಕಾರ ಮುಖ್ಯ. ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ , ಹಳೆಯ ಶೀತಲ ಮನೆಗಳಲ್ಲಿ ವಾಸವಾಗಿರುವ, ಕೆರೆ ಕಟ್ಟೆಗಳ ಸಮೀಪದಲ್ಲಿ ಮನೆ, ಜಮೀನು ಹೊಂದಿರುವವರು ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ಕಳಕಳಿಯ ಮನವಿ.
Tags
ಅರಕಲಗೂಡು