ಅರಕಲಗೂಡು :- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ಶ್ರೀಧರ್ ಗೌಡ ಅವರು ಹಮ್ಮಿಕೊಂಡಿರುವ ಪಾದಯಾತ್ರೆಯು ಇಂದು ಸಂಜೆ ತಾಲ್ಲೂಕಿನ ಮಲ್ಲಿಪಟ್ಟಣ ಗ್ರಾಮಕ್ಕೆ ಆಗಮಿಸಿದ .
ಕಳೆದ ಜು 29 ರಿಂದ ಆರಂಭವಾಗಿರುವ ಪಾದಯಾತ್ರೆಯ 6 ನೇ ದಿನದ ಪಾದಯಾತ್ರೆಯಲ್ಲಿ ಆಗಮಿಸಿದ ಶ್ರೀಧರ್ ಗೌಡ ಅವರನ್ನು ಮಲ್ಲಿಪಟ್ಟಣ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು ಹಾಗೂ ಇದೇ ಸಂದರ್ಭದಲ್ಲಿ ಶ್ರೀಧರ್ ಗೌಡ ಅವರಿಗೆ ಗ್ರಾಮಸ್ಥರು ಶಾಲು ಹೊದಿಸಿ ಸನ್ಮಾನಿಸಿದರು .ಹಾಗೂ ಇದೇ ಸಂದರ್ಭದಲ್ಲಿ ಶಶಿಧರ್ ಗೌಡ ತಮ್ಮೊಂದಿಗೆ ಹೆಜ್ಜೆ ಹಾಕುತ್ತಿರುವ ಕಾರ್ಯಕರ್ತರಿಗೆ ಸ್ವತಃ ತಾವೇ ಮುಂದೆ ನಿಂತು ಕಾಫಿ ಟೀ ಕೊಟ್ಟಿದ್ದು ವಿಶೇಷವಾಗಿತ್ತು .
Tags
ಅರಕಲಗೂಡು