ಹೊಳೆನರಸೀಪುರ:-ಬಿ.ಜೆ.ಪಿ ಸರ್ಕಾರದವರು ಕೋಮುವಾದಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಸಂವಿಧಾನವನ್ನು ಹಂತ ಹಂತವಾಗಿ ಕ್ಷೀಣಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುವುದರ ಮೂಲಕ ಮೀಸಲಾತಿಯನ್ನು ಕೊಚ್ಚಿ ನೆಲಕ್ಕುರುಳಿಸುತ್ತಿದ್ದಾರೆ ಎಂದು ಸಿ.ಐ.ಟಿ.ಯು ರಾಜ್ಯ ಮುಖಂಡ ಪಿ.ಡಿ. ಧರ್ಮೇಶ್ ತಿಳಿಸಿದರು. ಅವರು ಹಾಸನದಲ್ಲಿ ದಲಿತ ಜನಪರ ಸಂಘಟನೆಗಳ ವತಿಯಿಂದ ಸೆ.೧೫ ರಂದು ಆಯೋಜಿಸಿರುವ ಬೃಹತ್ ಐತಿಹಾಸಿಕ ಪ್ರತಿಭಟನಾ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳ ಮತ್ತು ಸಾಮಾಜಿಕ ಕಳಕಳಿ ಉಳ್ಳಂತಹ ಸಂಘಟನೆಗಳ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಆಹ್ವಾನಿಸಿ ಪಟ್ಟಣದಲ್ಲಿ ದಲಿತ ಪರ ಸಂಘಟಕರು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಂವಿಧಾನವೇ ಎಲ್ಲರಿಗೂ ಶ್ರೇಷ್ಠ ಗ್ರಂಥವಾಗಬೇಕಿದ್ದು, ಸಂವಿಧಾನಕ್ಕೆ ಧಕ್ಕೆಯಾಗುವಂತಹ ಯಾವುದೇ ಸಂಧರ್ಭ ಎದುರಾದರೂ ಸಂವಿಧಾನದ ಪರ ಘೋಷಣೆಯನ್ನು ಮೊಳಗಿಸುವುದರ ಮೂಲಕ ಸಂವಿಧಾನವನ್ನು ಪ್ರಬಲಗೊಳಿಸುವ ವಿಷಯದಲ್ಲಿ ನಾವೆಲ್ಲರೂ ಕಟಿಬದ್ದರಾಗಿ ನಿಲ್ಲಬೇಕು. ಐಕ್ಯತೆ, ಸಂವಿಧಾನದ ಶಕ್ತಿ ಸೆ.೧೫ ರಂದು ನಡೆಯುವ ಆಂದೋಲನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದರು. ದೇಶದಲ್ಲಿ ಸಂವಿಧಾನ ವಿರೋಧಿಸುವುದು, ಜನ ಸಾಮಾನ್ಯರಿಗೆ ಹೊರೆಯಾಗುವಂತಹ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಏರಿಕೆ ಮಾಡುವುದನ್ನು ಬಿಜೆಪಿ ಯವರು ಕಾಯಕ ಮಾಡಿಕೊಂಡAತಿದೆ. ಆ ಮೂಲಕ ರೈತರ, ದಲಿತರ, ಕಾರ್ಮಿಕರ ವಿರುದ್ದವಾದ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ನೊಂದವರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ಸರ್ಕಾರವನ್ನು ಕಿತ್ತೊಗೆಯುವವರೆಗು ಜನ ಸಾಮಾನ್ಯರಿಗೆ ನೆಮ್ಮದಿ ಬದುಕು ಅಸಾಧ್ಯ ಎಂದು ಕಳವಳ ವ್ಯಕ್ತಪಡಿಸಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎಂ. ಕೃಷ್ಣಪ್ಪ ಬಣದ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ ಜಿಲ್ಲೆಯಲ್ಲಿ ದಲಿತರನ್ನು ಮಟ್ಟ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಸ್ಥಳೀಯ ಶಾಸಕರು ದಲಿತರ ಏಳಿಗೆಯನ್ನು ಸಹಿಸದೆ ದಲಿತರ ಹಿತವನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಸೆ.೧೫ ರಂದು ನಡೆಯುವ ಪ್ರತಿಭಟನೆಗೆ ತಾಲ್ಲೂಕಿನಾದ್ಯಂತ ಸಹಸ್ರಾರು ಜನರು ಪಾಲ್ಗೊಳ್ಳುವುದರ ಮೂಲಕ ಅನ್ಯಾಯದ ವಿರುದ್ದ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಹೋರಾಟ ಮಾಡುವ ನಿಟ್ಟಿನಲ್ಲಿ ಜನಪರ ಕಾಳಜಿ ಉಳ್ಳವರು ಆಲೋಚನೆ ನಡೆಸಬೇಕು ಎಂದು ಕರೆ ನೀಡಿದ್ದರು. ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ವಿಜಯ್‌ಕುಮಾರ್ ಮಾತನಾಡಿ ನಮ್ಮ ಹೋರಾಟ ರಾಮ ಮತ್ತು ಭೀಮನ ನಡುವೆ ನಡೆಯುತ್ತಿದ್ದು, ಭೀಮನ ಹೋರಾಟಕ್ಕೆ ಸದಾ ದ್ವನಿಗೂಡಿಸಬೇಕೆಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ಸ್ಥಳೀಯ ಶಾಸಕರಾದ ಹೆಚ್.ಡಿ. ರೇವಣ್ಣ ಅವರು ದಲಿತ ಸಮೂದಾಯದ ಪ್ರಮುಖ ಯುವನಾಯಕ ಹಾಗೂ ಸಿ.ಐ.ಟಿ.ಯುನ ಜಿಲ್ಲಾ ಮುಖಂಡರಾದ ಎಂ.ಜಿ. ಪೃಥ್ವಿ ಅವರ ಜನಪರ ಹೋರಾಟವನ್ನು ಹತ್ತಿಕ್ಕುವುದರ ಮೂಲಕ ಅವರಿಗೆ ಸಾರ್ವಜನಿಕವಾಗಿ ದಮಕಿ ಹಾಕಿರುವ ಘಟನೆಯನ್ನು ಸಂಘಟಕರು ಸಭೆಯಲ್ಲಿ ಸಾಮೂಹಿಕವಾಗಿ ಖಂಡಿಸಿದರು. ಸೆ. ೧೫ ರಂದು ನಡೆಯುವ ಜಿಲ್ಲಾ ಮಟ್ಟದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಹೋರಾಟಗಾರರ ನಿಲುವನ್ನು ಖಂಡಿಸುವAತಹ ಜನಪ್ರತಿನಿಧಿಗಳ ವರ್ತನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಸಭೆಯಲ್ಲಿ ಮುಖಂಡರುಗಳು ತಿಳಿಸಿದರು. ದಲಿತ ಸಂಘಟನೆಗಳ ಪ್ರಮುಖ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಮುಖಂಡರು ಗಳಾದ ಹೆಚ್.ಕೆ. ಸಂದೇಶ್, ಹೆಚ್.ಎಸ್ ರಾಜ್‌ಶೇಖರ್, ಅಂಬುಗ ಮಲ್ಲೇಶ್, ಕುಪ್ಪೆ ಉಮೇಶ್, ಎಂಜಿ. ಪೃಥ್ವಿ, ಕೃಷ್ಣದಾಸ್, ಇಲಿಯಾಸ್ ಪಾಷ, ಗ್ರಾಮಪಂಚಾಯಿತಿ ಸದಸ್ಯೆ ರಾಧಾಮಣಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜು, ಚಿನ್ನಸ್ವಾಮಿ, ಹೆಚ್.ಡಿ. ರಮೇಶ, ವರ್ಮನ್, ಹೆಚ್.ಟಿ. ಲಕ್ಷö್ಮಣ, ಪುರಸಭೆ ಸದಸ್ಯ ಹೆಚ್.ಡಿ ಉಮೇಶ್, ಆಶ್ರಯ ಸಮಿತಿಯ ನಾಮನಿರ್ದೇಶಿತ ಸದಸ್ಯ ರಂಗಸ್ವಾಮಿ, ದಿನೇಶ್ , ಜಗದೀಶ್, ಐ.ಇ ಹರೀಶ, ಆನಂದ ಸೇರಿದಂತೆ ಸ್ಥಳೀಯ ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
Tags
ಹೊಳೆನರಸೀಪುರ