ಹಾಸನ: ಶ್ರೀ ಗಣಪತಿ ಸೇವಾ ಸಮಿತಿ ವತಿಯಿಂದ 1955 ರಿಂದ ಆರಂಭವಾಗಿ ಕಳೆದ 68 ವರ್ಷಗಳಿಂದ ಮುನ್ನಡೆದುಕೊಂಡು ಬರುತ್ತಿರುವ ಗಣೇಶೋತ್ಸವ ಈ ವರ್ಷವೂ ವಿಜೃಂಭಣೆಯಿAದ ನಡೆಯುತ್ತಿದ್ದು, ಪ್ರತಿ ದಿನ ಎರಡು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸಿ ವಿಘ್ನನಿವಾರಕನ ಕೃಪೆಗೆ ಪಾತ್ರರಾಗಿದ್ದರೆ ಎಂದು ಸಮಿತಿ ಅಧ್ಯಕ್ಷ ಡಾ.ಎಚ್. ನಾಗರಾಜ್ ಹೇಳಿದರು.
ಗಣಪತಿ ಪೆಂಡಾಲ್‌ನಲ್ಲಿAದು ಮಾತನಾಡಿದ ಅವರು, ಈ ಬಾರಿ 24 ದಿನಗಳ ಕಾಲ ಉತ್ಸವ ನಡೆಯಲಿದ್ದು, ಪ್ರತಿ ದಿನ ಬೆಳಗ್ಗೆ ಮಹಾ ಮಂಗಳಾರತಿ, 2000 ಜನರಿಗೆ ಪ್ರಸಾದ ವಿನಿಯೋಗ ಮಾಡಲಾಗುತ್ತಿದೆ ಎಂದರು.
ಪ್ರತಿದಿನ ನೃತ್ಯ,ನಾಟಕ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳು ವಿವಿಧ ಕಲಾ ತಂಡಗಳಿAದ ನಡೆಯುತ್ತಿವೆ. ಹೋಮ, ಹವನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳೂ ಜರುಗುತ್ತಿವೆ. ಅನ್ನ ಸಂತರ್ಪಣೆ ಸೇರಿದಂತೆ ಎಲ್ಲಾ ವಿಭಾಗಕ್ಕೂ ವಿಶೇಷ ತಂಡ ರಚಿಸಿ ಕಾರ್ಯಕ್ರಮ ನಿರ್ವಹಣೆಗೆ ಸಮಿತಿ ಯೋಜನೆ ರೂಪಿಸಿದೆ. ಅದಕ್ಕನುಗುಣವಾಗಿ ಆಯಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.
ವಿಶೇಷವಾಗಿ ಈ ಬಾರಿ ಸೆ.10 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಸಮಿತಿ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ನುರಿತ ವೈದ್ಯರಿಂದ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನಡೆಯಲಿದೆ ಎಂದು ತಿಳಿಸಿದರು
ಉತ್ಸವದ ಅಂತಿಮ ದಿನ ಸೆ.24 ರಂದು ಗಣಪತಿ ವಿಸರ್ಜನೆ ಕಾರ್ಯಕ್ರಮದ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಗೌರಿ ಗಣೇಶ ಮೂರ್ತಿಯ ಬೃಹತ್ ಮೆರವಣಿಗೆ ನಡೆಯಲಿದೆ.
ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಪ್ರೀತಂಗೌಡ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಗಣಪತಿ ಸೇವಾ ಸಮಿತಿ ಉಪಾಧ್ಯಕ್ಷ ಸುರೇಗೌಡ, ಹುಡಾ ಅಧ್ಯಕ್ಷ ಲಲಾಟ ಮೂರ್ತಿ, ಅನಂತ ನಾರಾಯಣ, ಕೆ.ಪಿ.ಎಸ್ ಪ್ರಮೋದ್ ಇತರಿದ್ದರು.
Tags
ಹಾಸನ