ಕೆಎಸ್ ಆರ್ ಟಿಸಿ ನಿಗಮದ ಅಧಿಕಾರಿಗಳೆ ಇತ್ತ ಗಮನಿಸಿ

ಕೆಎಸ್ ಆರ್ ಟಿಸಿ ನಿಗಮದ ಅಧಿಕಾರಿಗಳೆ ಇತ್ತ ಗಮನಿಸಿ : ಬಸ್ ನಿಲ್ದಾಣಗಳಲ್ಲದ ಜಾಗದಲ್ಲಿ ಪ್ರಯಾಣಿಕರನ್ನು ಇಳಿಸಿ ಸಂಕಷ್ಟಕ್ಕೀಡು ಮಾಡುತ್ತಿರುವ ನಿರ್ವಾಹಕರು .

ಆಲೂರು :-ಹಿಂದಿನ ಕಾಲದಲ್ಲಿ ಜನರು ಊರಿನಿಂದ ಊರಿಗೆ ಸಾಗಲು ನಡೆದುಕೊಂಡು ಹೋಗುತ್ತಿದ್ದನ್ನು ತಪ್ಪಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹೊಸ ಪ್ರತಿಯೊಂದು ಹಳ್ಳಿಗೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುತ್ತಿದೆ .ಆದರೆ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಗಮದ ಚಾಲಕ ನಿರ್ವಾಹಕರು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಪ್ರಯಾಣಿಕರನ್ನು ಬಸ್ ನಿಲ್ದಾಣಗಳ ಇಲ್ಲದ ಜಾಗಗಳಲ್ಲಿ ಇಳಿಸಿ ಪ್ರಯಾಣಿ ಕರು ಸಂಕಷ್ಟಕ್ಕೀಡಾಗುತ್ತಿದ್ದಾರೆಂಬ  ಮಾಹಿತಿ ಲಭ್ಯವಾಗಿದೆ.

ಈ ವಿಚಾರವಾಗಿ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಆಲೂರು ಸಕಲೇಶಪುರ ತಾಲ್ಲೂಕಿನ ಕರವೇ ಉಸ್ತುವಾರಿಗಳಾದ ರಘು ಪಾಳ್ಯ ,ತಾಲ್ಲೂಕಿನ ಹಲವೆಡೆ ಸೇರಿದಂತೆ  ಬಾಳ್ಳುಪೇಟಯ ಬೈಪಾಸ್ ನಲ್ಲಿ ಕೆ ಎಸ್ ಆರ್ ಟಿ ಚಾಲಕರು ಎಲ್ಲೆಂದರಲ್ಲಿ ಬೇರೆ ಊರುಗಳಿಂದ ಸಂಬಂಧಿಕರ ಮನೆಗೆ ಬಸ್ಸಿನಲ್ಲಿ ಬರುವ ವಯೋವೃದ್ಧರು ಮತ್ತು ಮಹಿಳೆಯರು ಮಕ್ಕಳನ್ನು  ರಾತ್ರಿ ಸಮಯದಲ್ಲಿ ಹೆದರಿಸಿ ಬಸ್ ನಿಲ್ದಾಣಗಳ ಇಲ್ಲದ ಜಾಗಗಳಲ್ಲಿ ಇಳಿಸಿ ಹೋಗುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ ಹಾಗೂ ಈ ಭಾಗದಲ್ಲಿ ಕಾಡಾನೆ ಹಾವಳಿ ಸೇರಿದಂತೆ ಕಳ್ಳಕಾಕರ ಭಯವೂ ಹೆಚ್ಚಾಗಿದೆ .ಬಸ್ ಚಾಲಕ ಮತ್ತು ನಿರ್ವಾಹಕರ ಬೇಜವಾಬ್ದಾರಿಯಿಂದ ಅಮಾಯಕರು ತಮ್ಮ ಜೀವ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಎದುರಾಗಬಹುದು ಆದ್ದರಿಂದ ಇದಕ್ಕೆ ಸಂಬಂಧಿಸಿದ ನಿಗಮದ ಅಧಿಕಾರಿಗಳು ಬಸ್ ನಿಲ್ದಾಣವಿರುವ ಜಾಗಗಳಲ್ಲಿ ಪ್ರಯಾಣಿಕರನ್ನು ಇಳಿಸಬೇಕೆಂದು ಚಾಲಕ ನಿರ್ವಾಹಕರಿಗೆ ಸೂಚಿಸಬೇಕೆಂದು ಮನವಿ ಮಾಡಿದ್ದಾರೆ .

Post a Comment

Previous Post Next Post