ಗೌರಿಕಾಲುವೆಯ ಶ್ರೀ ವಿದ್ಯಾಗಣಪತಿ ವಿಸರ್ಜನೆ

ಚಿಕ್ಕಮಗಳೂರು, ಸೆಪ್ಟೆಂಬರ್ ೦೪:- ನಗರದ ಗೌರಿಕಾಲುವೆಯಲ್ಲಿ ಛಾಯಾಪುತ್ರ ಯುವಕರ ಸಂಘದ ವತಿಯಿಂದ ಶ್ರೀ ವಿದ್ಯಾಗಣಪತಿಯನ್ನು ಪ್ರತಿಷ್ಟಾಪಿಸಿ ಕೊನೆಯ ದಿನವಾದ ಶನಿವಾರ ಗಣಪತಿಗೆ ವಿಶೇಷ ಅಲಂಕಾರದೊAದಿಗೆ ವಾರ್ಡಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬಸವನಹಳ್ಳಿ ಕೆರೆಯ ಸಮೀಪದ ಕಲ್ಯಾಣಿಯಲ್ಲ್ಲಿ ವಿಸರ್ಜನೆ ಮಾಡಲಾಯಿತು.
ಕಳೆದ ನಾಲ್ಕು ದಿನಗಳ ಹಿಂದೆ ಶ್ರೀ ವಿದ್ಯಾ ಗಣಪತಿಯನ್ನು ಪ್ರತಿಷ್ಟಾಪಿಸಿ ವಿವಿಧ ಕಾರ್ಯಕ್ರಮ ಹಾಗೂ ಹೋಮಹವನಗಳೊಂದಿಗೆ ಅನ್ನಸಂತರ್ಪಣೆ ನಡೆಸಲಾಗಿತ್ತು. ಗೌರಿಕಾಲುವೆಯ ಗಣಪತಿ ಪ್ರತಿಷ್ಟಾಪನಾ ಸಮಯದಲ್ಲಿ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹಾಗೂ ಪಲ್ಲವಿ ಸಿ.ಟಿ.ರವಿ ಆಗಮಿಸಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. 
ಈ ಸಂದರ್ಭದಲ್ಲಿ ಸಂಘದ ಯುವಕರಾದ ಸಿ.ಎನ್.ರವಿ, ಚೇತನ್, ಸಂತೋಷ್, ನಂದೀಶ, ತ್ಯಾಗು, ಪಿ.ಸುನೀಲ್, ಪಿ.ಪುನೀತ್, ಪುನಿ, ಜೆ.ಸಿ.ಪ್ರವೀಣ, ಸೃಜ, ಮಂಜ, ಲಿಖಿತ್, ಲೋಹಿತ್, ಲತೇಶ, ಆಟೋ ಲೋಹಿತ್,  ಶ್ರೀಕಾಂತ, ಅಮರ್, ಧರ್ಮ, ಉಮೇಶ, ಮಂಜುನಾಥ್, ಗಿರೀಶ್, ರಾಬರ್ಟ್ ಮತ್ತಿತರರು ಹಾಜರಿದ್ದರು.

Post a Comment

Previous Post Next Post