ನವದೆಹಲಿ : ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಮುಂದಿನ ಹಂತದಲ್ಲಿ ಕರ್ನಾಟಕದ ಕೋಲಾರ, ಹಾಸನ ಮತ್ತು ರಾಯಚೂರು ನಗರಗಳನ್ನು ಪರಿಗಣಿಸಲಾಗಿದೆ.
ಉಡಾನ್ ಗೆ ಅರ್ಹವಾಗಿರುವ ದೇಶದ 54 ನಗರಗಳ ಪಟ್ಟಿಯನ್ನು ವಿಮಾನಯಾನ ಸಚಿವಾಲಯ ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ 3 ನಗರಗಳು ಸ್ಥಾನ ಪಡೆದಿವೆ. ಮುಂದಿನ ಹಂತದ ಉಡಾನ್ ಯೋಜನೆಗೆ ದೇಶದ 54 ಸ್ಥಳಗಳನ್ನು ಗುರುತಿಸಲಾಗಿದೆ. ಪ್ರವಾಸಿ ತಾಣಗಳು, ವನ್ಯಜೀವಿ ಧಾಮ ಮತ್ತು ಧಾರ್ಮಿಕ ಕೇಂದ್ರಗಳ ಸಮೀಪದ ನಗರಗಳನ್ನು ಈ ಹಂತದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪರಿಗಣಿಸಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.