೭೫೬ ಮಂದಿ ಸಿಬ್ಬಂದಿ ನಿಯೋಜನೆ:ನಿರಂತರ ದರ್ಶನಕ್ಕೆ ಅವಕಾಶ
ಹಾಸನ: ಶ್ರೀ ಹಾಸನಾಂಬೆ ಹಾಗೂ ಶ್ರೀ ಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವ ಅ. 13 ರಿಂದ 27 ರವರೆಗೆ ಜರುಗಲಿದ್ದು ಪೊಲೀಸ್ ಇಲಾಖೆಯಿಂದ ಅಗತ್ಯ ಬಂದುಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿ ಸಿಬ್ಬಂದಿಗಳಿಗೆ ಕಟ್ಟುನಿಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು .
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ದೇವರ ದರ್ಶನದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೂರು ಸರದಿಯಂತೆ ಬಂಧೂಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ,
ಈ ಬಾರಿ ದೇವಿಯ ದರ್ಶನಕ್ಕೆ ಜಿಲ್ಲೆ ನೆರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಪ್ರತಿದಿನ 20 ರಿಂದ 25 ಸಾವಿರ ಭಕ್ತರು ಆಗಮಿಸುವ ಸಂಭವವಿದೆ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಗಣ್ಯ ವ್ಯಕ್ತಿಗಳು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಪ್ರಮುಖ ವ್ಯಕ್ತಿಗಳು ದರ್ಶನಕ್ಕೆ ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಹ ಭಾಗವಹಿಸಲಿದ್ದಾರೆ .ಆದ್ದರಿಂದ ಅಗತ್ಯ ಬಂದೂ ಬಸ್ತ್ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಲಿದೆ ಎಂದರು.
756 ಸಿಬ್ಬಂದಿ ನಿಯೋಜನೆ:ಬಂದೂಬಾಸ್ತ್ ವ್ಯವಸ್ಥೆಗೆ 3 ಡಿ ವೈ ಎಸ್ ಪಿ, ೬ ಸಿಪಿಐ, 30 ಪಿಎಸ್ಐ, 45 ಎಎಸ್ಐ , 143 ಹೆಡ್ ಕಾನ್ಸ್ಟೇಬಲ್ , 191 ಕಾನ್ಸ್ಟೇಬಲ್, ಮಹಿಳಾ ಕಾನ್ಸ್ಟೇಬಲ್ 45 ಮಂದಿ, ಹೋಂ ಗಾರ್ಡ್ 293 ಮಂದಿ ಸೇರಿದಂತೆ 756 ಮಂದಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ ಎಂದರು.