ಹಾಸನ ಅ.12:- ಹಾಸನಾಂಬ ದೇವಾಲಯದ ಆವರಣದಲ್ಲಿಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆತ್ಯಾಕರ್ಷಕ 'ಹಾಸನಾಂಬಾ ಬೆಳಕಿನ ಹಬ್ಬ' ಲೈಟಿಂಗ್ ವ್ಯವಸ್ಥೆ ಕಾರ್ಯಕ್ರಮವನ್ನು ಶಾಸಕರದ ಪ್ರೀತಂ ಜೆ. ಗೌಡ ಮತ್ತು ಜಿಲ್ಲಾಧಿಕಾರಿ ಅರ್ಚನ ಎಂ.ಎಸ್ ಅವರು ಉದ್ಘಾಟಿಸಿದರು.
ಇದೇ ವೇಳೆ ನಗರಸಭೆ ಅಧ್ಯಕ್ಷರಾದ ಮೋಹನ್, ಹಾಸನಾಂಬ ಮತ್ತು ಸಿದ್ದೇಶ್ವರ ದೇವಾಲಯದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಬಿ.ಎ ಜಗದೀಶ್, ಡಿ.ವೈ,ಎಸ್.ಪಿ ಉದಯ್ ಭಾಸ್ಕರ್, ನಗರಸಭೆ ಪೌರಾಯುಕ್ತರಾದ ಪರಮೇಶ್ವರಪ್ಪ, ತಹಶೀಲ್ದಾರ್ ನಟೇಶ್ ಹಾಗೂ ಮತ್ತಿತರರು ಹಾಜರಿದ್ದರು.
ವರ್ಣ ರಂಜಿತ ವಿದ್ಯುತ್ ದೀಪಾಲಂಕಾರ,ಚಿತ್ತಾಕರ್ಷಕ ವಾಗಿ ಮೂಡಿರುವ ವಿದ್ಯುತ್ ಅಲಂಕಾರಿಕ ಆಕೃತಿಗಳು, ಮರ ಗಿಡಗಳಿಗೆ ಇಳಿಬಿಟ್ಟ ಬೆಳಗು ದೀಪಗಳ ಸಾಲು ಮತ್ತು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಈ ಬಾರಿಯ ಹಾಸನಾಂಬಾ ಜಾತ್ರಾ ಮಹೋತ್ಸವ ವನ್ನು ಬರಳಕಿನ ಹಬ್ಬವಾಗಿಯೂ ಪರಿವರ್ತಿಸಿದೆ.
ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ದೇವಾಲಯ ಹಾಗೂ ರಾಜ ಗೋಪುರಗಳು ಬಗೆ ಬಗೆಯ ಬೆಳಕಿನ ಸಾಲಿನಿಂದ ಜನರ ಕಣ್ಮನ ಸೆಳೆಯುತ್ತಿವೆ