ಕೊಲೆಗೈದು ಶವ ಎಸೆಯಲು ಯತ್ನ ಪಲ್ಟಿಯಾದ ಕಾರು: ಸಿಕ್ಕಿಬಿದ್ದು ಮೂವರು ಹಂತಕರು: ತನಿಖೆಗೆ ಚುರುಕು


ಹಾಸನ: ಅಪರಿಚಿತ ವ್ಯಕ್ತಿಯಲ್ಲಿ ಬೇರೆಡೆ ಕೊಲೆ ಮಾಡಿ ತಾಲೂಕಿನ ಶಾಂತಿಗ್ರಾಮ ಬಳಿಯ ರೈಲ್ವೆ ಹಳಿ ಮೇಲೆ ಬಿಸಾಡಲು ಬಂದಿದ್ದ ಮೂವರು ಹಂತಕರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಮೃತದೇಹವನ್ನು ಬೊಲೆರೊ ಕಾರಿನಲ್ಲಿ ತಂದು ಶಾಂತಿಗ್ರಾಮ ಬಳಿಯ ಬೆಣಗಟ್ಟೆ ಸಮೀಪದ ರೈಲ್ವೆ ಟ್ರ‍್ಯಾಕ್‌ನಲ್ಲಿ ಬಿಸಾಡುವ ವೇಳೆ ಕಾರು ಪಲ್ಟಿಯಾಗಿದೆ. ಶವದ ಸಮೇತ ಟ್ರಾ÷್ಯಕ್ ಮೇಲೆ ಬೊಲೆರೊ ವಾಹನ ಉರುಳಿಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಸುದ್ದಿ ತಿಳಿಸಿದ್ದಲ್ಲದೆ ನಂತರ ಅವರನ್ನು ಹಿಡಿದು ಒಪ್ಪಿಸಿದ್ದಾರೆ. ಶವದ ಜೊತೆ ಜೀಪ್‌ನೊಳಗೆ ಸಿಲುಕಿದ್ದ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ರಾಷ್ಟಿçÃಯ ಹೆದ್ದಾರಿ 75 ರ ಪಕ್ಕದ ಡಾಬಾವೊಂದರಲ್ಲಿ ಕೆಲಸಮಾಡುತ್ತಿದ್ದ ವ್ಯಕ್ತಿಯಲ್ಲಿ ಅಲ್ಲೇ ನೌಕರಿಗಿದ್ದ ಮೂವರು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊಲೆಯಾಗಿರುವ ವ್ಯಕ್ತಿ ಹಾಗೂ ಆರೋಪಿಗಳ ಬಗ್ಗೆ ಖಾಕಿ ಪಡೆ ಮಾಹಿತಿ ಕಲೆ ಹಾಕುತ್ತಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಡಾಬಾ ಯಾವುದು, ಕೆಲಸ ಮಾಡುತ್ತಿದ್ದ ವ್ಯಕ್ತಿ ಯಾರು, ಕೊಲೆಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಚುರುಕುಗೊಂಡಿದೆ.

Post a Comment

Previous Post Next Post