ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಅಧಿಕಾರಿಗಳ ದರ್ಪ

ಹಳೆಬೀಡಿನ ಪಾರ್ವತಮ್ಮ ನಂಜೇಗೌಡ ಕಲ್ಯಾಣ ಮಂಟಪದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವ ಅದ್ಧೂರಿಯಾಗಿಯೇ ಪ್ರಾರಂಭವಾಗಿ ಧಾರ್ಮಿಕ ವಿಧಾನಗಳನ್ನು ಹುಲ್ಲಳ್ಳಿ ಸುರೇಶ್ ಸಾಂಗವಾಗಿ ನೆರವೇರಿಸುತ್ತದ್ದ ಸಂದರ್ಭದಲ್ಲಿಯೇ ಕಾರ್ಯಕ್ರಮ ನಡೆಯುತ್ತಿದ್ದ ಜಾಗದ ಮೇಲೆ ಪೋಲೀಸ್ ದಾಳಿ ನಡೆದಿದೆ. ಕಾರ್ಯಕ್ರಮಕ್ಕೆ ಲಗ್ಗೆಯಿಟ್ಟು ದಬ್ಬಾಳಿಕೆ ನಡೆಸಿದ ಅಧಿಕಾರಿಗಳು, ಕಾರ್ಯಕ್ರಮಕ್ಕೆ ಆಗಮಿಸುವ  ಜನರಿಗೆ ನೀಡಬೇಕೆಂದಿದ್ದ ಪ್ರಸಾದ, ಸ್ತೋತ್ರದ ಪುಸ್ತಕಗಳನ್ನೂ ಸೀಜ್ ಮಾಡಿದ್ದಾರೆ. 


 ಯಾವುದೇ ಡಬ್ಬಗಳ ಮೇಲಾಗಲಿ, ಪುಸ್ತಕಗಳ ಮೇಲಾಗಲೀ ಸುರೇಶ್ ಅವರ ಭಾವಚಿತ್ರವನ್ನು ಹೊರತಾಗಿಸಿ ಯಾವುದೇ ಪಕ್ಷದ ಲೋಗೋಗಳಾಗಲಿ ಅಥವಾ ಪ್ರಚಾರಕ್ಕೆ ಸಂಬಂಧಿಸಿದ ವಿಚಾರಗಳಾಗಲೀ ಇರಲಿಲ್ಲ. ಆದರೂ ಹಿಂದೂ ದಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವ ಯತ್ನ ನಡೆದಿದೆ. ಈ ಕುರಿತಾಗಿ ಪೋಲೀಸರಾಗಲೀ ಅಥವಾ ಮೇಲಾಧಿಕಾರಿಗಳಾಗಲೀ ಸ್ಪಂದನೆ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ.


Post a Comment

Previous Post Next Post