ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರ ಆಪ್ತ ಸೋಮನಹಳ್ಳಿ ನಾಗರಾಜ್ ಅದ್ಯಕ್ಷರಾಗಿರುವ ಹಾಸನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (DCC BANK) ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ 2 ದಿನಗಳಿಂದ ಬ್ಯಾಂಕ್‌ಗೆ ಗ್ರಾಹಕರು ಬರದಂತೆ ನಿರ್ಬಂಧಿಸಿ ಪರಿಶೀಲನೆ ನಡೆಸಲಾಗ್ತಿದೆ.
ಐವರು ಅಧಿಕಾರಿಗಳ ತಂಡ ಬ್ಯಾಂಕ್‌ನ ಎಲ್ಲ ಫೈಲ್‌ಗಳ ಪರಿಶೀಲನೆ ನಡೆಸುತ್ತಿದ್ದು, ಬ್ಯಾಂಕ್‌ನ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಮಾಹಿತಿಯನ್ನ ಕಲೆಹಾಕ್ತಿದಾರೆ. ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ದೂರುಗಳ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಚುನಾವಣೆ ಹೊತ್ತಲ್ಲಿ ಜೆಡಿಎಸ್ ಪಕ್ಷದ ಹಿಡಿತವಿದೆ ಎನ್ನಲಾಗಿರೊ DCC ಬ್ಯಾಂಕ್ ಮೇಲೆ ದಾಳಿ ನಡೆದಿರುವುದು ಭಾರಿ ಕುತೂಹಲ ಮೂಡಿಸಿದೆ. ಅಂದ್ಹಾಗೆ DCC ಬ್ಯಾಂಕ್ ಹಾಸನ ಜಿಲ್ಲೆಯಲ್ಲಿ 34 ಶಾಖೆಗಳನ್ನು ಹೊಂದಿದ್ದು, ವಾರ್ಷಿಕ ಸುಮಾರು 1700 ಕೋಟಿ ರೂ. ವಹಿವಾಟು ನಡೆಸುತ್ತಿದೆ
Tags
ಹಾಸನ