ಹಾಸನದ ಯುವ ನಿರ್ದೇಶಕನ ಸಿನಿಮಾ ಬ್ರಹ್ಮಕಮಲ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವದಲ್ಲಿ ಪ್ರದರ್ಶನ

ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದ  ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಈಗ ‘ಬ್ರಹ್ಮ ಕಮಲ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಈ ಚಿತ್ರ ಕೂಡ  ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಜನಮನ ಮುಟ್ಟುತ್ತಿದೆ.

“ದಾರಿ ಯಾವುದಯ್ಯಾ ವೈಕುಂಠಕೆ” ಖ್ಯಾತಿಯ ನಿರ್ದೇಶಕ “ಸಿದ್ದು ಪೂರ್ಣಚಂದ್ರ” ರವರು   ಕಥೆ,ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಿನಿಮಾದ ಶೀರ್ಷಿಕೆ “ಬ್ರಹ್ಮಕಮಲ”. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿ ಬೆಂಗಳೂರಿನ ಸುತ್ತಮುತ್ತ  ನಡೆಯುತ್ತಿದೆ.ರಾತ್ರಿ ಹುಟ್ಟಿ ರಾತ್ರಿಯೇ ಮುರುಟಿ ಹೋಗುವ ಒಂದು ಮಗುವಿನ ಸುತ್ತ ಘಟಿಸುವ ಕಥೆಯೇ ಬ್ರಹ್ಮ ಕಮಲ.

ತಾರಾಗಣದಲ್ಲಿ ಅಧ್ವಿತಿ ಶೆಟ್ಟಿ, ಲೋಕೇಂದ್ರ ಸೂರ್ಯ, ಋತು ಚೈತ್ರ, ಮಮತಾ ರಾಹುತ್,ಪ್ರಮಿಳಾ ಸುಬ್ರಹ್ಮಣ್ಯ, ಬಲ ರಾಜ್ವಾಡಿ, ಸಿದ್ದು ಪೂರ್ಣಚಂದ್ರ, ಆಟೋ ನಾಗರಾಜ್, ಗಂಡಸಿ ಸದಾನಂದಸ್ವಾಮಿ, ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ.

ಛಾಯಾಗ್ರಹಣ ಲೋಕೇಂದ್ರ ಸೂರ್ಯ,  ಸಂಕಲನ ದೀಪು ಸಿ ಎಸ್, ಸಂಗೀತ ಅನಂತ್ ಆರ್ಯನ್ ಹೊಣೆ ಹೊತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಎ.ಕೆ. ಪುಟ್ಟರಾಜು. ನಿರ್ಮಾಣ ನಿರ್ವಹಣೆ ಮತ್ತು ವಸ್ತ್ರ ವಿನ್ಯಾಸ ಋತು ಚೈತ್ರ.


ಪೂರ್ಣಚಂದ್ರ ಫಿಲಂಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಮುಖ್ಯಪಾತ್ರದಲ್ಲಿ ಅದ್ವಿತಿಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ಋತುಚೈತ್ರ, ಲೋಕೇಂದ್ರಸೂರ್ಯ, ಬಲ ರಾಜವಾಡಿ, ಗಂಡಸಿ ಸದಾನಂದಸ್ವಾಮಿ,ಕವಿತ ಕಂಬಾರ್, ರಾಧಾ ರಾಮಚಂದ್ರ ಇನ್ನೂ ಮುಂತಾದವರು ಆಭಿನಯಿಸಿದ್ದಾರೆ. 
ಈಗಾಗಲೇ ಬೆಂಗಳೂರು ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡಿದೆ. ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವಕ್ಕೆ ‘ಬ್ರಹ್ಮಕಮಲ’ ಆಯ್ಕೆಯಾಗಿದೆ. ಈ ವಿಷಯ ಇಡೀ ಚಿತ್ರತಂಡಕ್ಕೆ ಸಂತಸತಂದಿದೆ ಎನ್ನುತ್ತಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.

Post a Comment

Previous Post Next Post