ಬೇಲೂರು ರಥದ ಮುಂದೆ ಕುರಾನ್ ಪಠಣವಿಲ್ಲ: ಮೆಟ್ಟಿಲ ಬಳಿ ವಂದನೆಗೆ ಅವಕಾಶ

ಇಲ್ಲಿನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ರಥೋತ್ಸವದ ವೇಳೆ ರಥದ ಮುಂದೆ ಖಾಜಿ ಸಾಹೇಬರು ಕುರಾನ್ ಪಠಣ ಮಾಡುವಂತಿಲ್ಲ ಎಂದು ಸರಕಾರ ಆದೇಶಿಸಿದೆ.
ಕುರಾನ್ ಪಠಣ ಮಾಡುವ ಬಗ್ಗೆ ಪರ ವಿರೋದದ ಹೇಳಿಕೆ ಹಾಗೂ ಪ್ರತಿಭಟನೆ ಸಹ ನಡೆದಿತ್ತು. ನಂತರ ಧಾರ್ಮಿಕ ದತ್ತಿ ಇಲಾಖೆಯಿಂದ ಆಗಮಿಕ ಪಂಡಿತರನ್ನು ಕಳುಹಿಸಿ ದೇಗುಲದ ಮ್ಯಾನ್ಯುಯಲ್ ಪರಿಶೀಲನೆ ನಡೆಸಿ ವರದಿಯನ್ನು ಸರಕಾರಕ್ಕೆ ಕಳುಹಿಸಿದ್ದರು.
ನಂತರ ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ನಡೆಸಿದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ರಥದ ಮುಂದೆ ಕುರಾನ್ ಪಠಣ ಮಾಡುವಂತಿಲ್ಲ, ಆದರೆ ದೇವರನ್ನು ರಥದ ಮೇಲೆ ಕೂರಿಸಿದ ಮೇಲೆ ದೇವಾಲಯದ ಮುಂಭಾಗದಲ್ಲಿ ಇರುವ ಬಾವಿಯ ಬಳಿ ನಿಂತು ದೇವರಿಗೆ ನಮಸ್ಕರಿಸಿ ದೇಗುಲದಿಂದ ನೀಡುವ ಗೌರವವನ್ನು ಸ್ವೀಕರಿಸಬಹುದೆಂದು ತಿಳಿಸಲಾಗಿದೆ.


ದೇವಾಲಯಕ್ಕೆ ತ್ರಿಮತಸ್ಥರೂ, ವೈಶ್ಯರು, ವೀರಶೈವರು, ಮುಸಲ್ಮಾನರಲ್ಲಿ ಕೆಲವರು ಭಕ್ತರಾಗಿ ಸೇವೆ ಸಲ್ಲಿಸುವುದು ನಡೆದುಕೊಂಡು ಬಂದಿದೆ ಎಂಬುದನ್ನು ಆದೇಶದಲ್ಲಿ ಸ್ಪಷ್ಟ ಪಡಿಸಲಾಗಿದೆ.

Post a Comment

Previous Post Next Post