ಜೆಡಿಎಸ್ ಹಾಸನ ಟಿಕೆಟ್ ಸಂಕಷ್ಟಕ್ಕೆ ತೆರೆ, ಸ್ವರೂಪ್ ಮನೆ ಮುಂದೆ ಬೆಂಬಲಿಗರ ಸಂಭ್ರಮಾಚರಣೆ!

ಜೆಡಿಎಸ್ ಅಭ್ಯರ್ಥಿಗಳಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತೀವ್ರ ಕಗ್ಗಂಟಾಗಿದ್ದ ಹಾಸನ ಕ್ಷೇತ್ರ ಟಿಕೆಟ್ ಕೊನೆಗೂ ಬಗೆ ಹರಿದಿದೆ. ಹೆಚ್ ಡಿ ಕುಮಾರಸ್ವಾಮಿ ತಮ್ಮ ಮಾತಿನಂತೆ ಸ್ವರೂಪ್‌ಗೆ ಟಿಕೆಟ್ ನೀಡಿದ್ದಾರೆ. ಇತ್ತ ಭವಾನಿ ರೇವಣ್ಣಗೆ ಹಾಸನ ಟಿಕೆಟ್ ಕೈತಪ್ಪಿದೆ.

ಈ ಘೋಷಣೆ ಹೊರಬೀಳುತ್ತಿದ್ದಂತೆ, ಸ್ವರೂಪ್ ಮನೆ ಮುಂದೆ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ. ಸ್ವರೂಪ್ ಪರ ಜಯಘೋಷ ಮೊಳಗಿಸಿದ್ದಾರೆ. ಆದರೆ ರೇವಣ್ಣ ಬೆಂಬಲಿಗರ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

Post a Comment

Previous Post Next Post