ಹಾಸನ :- ಪ್ರವಾಸದ ಅಂಗವಾಗಿ ರೆಸಾರ್ಟ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೋಡು ಬಳಿ ನಡೆದಿದೆ.
ಖುಷಿ(12) ಸಾವನ್ನಪ್ಪಿದ್ದ ಮೃತ ಬಾಲಕಿಯಾಗಿದ್ದು, ತನ್ನ ಪೋಷಕರಾದ ಧನರಾಜ್ ಮತ್ತು ವೀಣಾ ಜೊತೆಗೆ ಪ್ರವಾಸಕ್ಕೆಂದು ಬಿಕ್ಕೋಡು ಬಳಿಯ ಗ್ರೀನ್ ಪಾಸ್ಟ್ ರೆಸಾರ್ಟ್ ಗೆ ಹೋಗಿದ್ದ ಸಂದರ್ಭದಲ್ಲಿ ತನ್ನ ಪೋಷಕರು ಊಟ ಮಾಡುವವೇಳೆ ಪೋಷಕರಿಗೆ ತಿಳಿಯದಂತೆ ಬಾಲಕಿ ಖುಷಿ ಈಜುಕೊಳದಲ್ಲಿ ಆಟವಾಡಲು ತೆರಳಿದ್ದಳು ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.