ಪಡಿತರರಿಗೆ 10 ಕೆಜಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಹೆಚ್ಚುವರಿ ಅಕ್ಕಿ ಸರಬರಾಜು ಮಾಡಲು ಕೇಂದ್ರ ಸರ್ಕಾರ ಒಪ್ಪದಾ ಹಿನ್ನೆಲೆಯಲ್ಲಿ ಜೂನ್ 20ರಂದು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆಗೆ ನಿರ್ಧಾರ ಕೈಗೊಳ್ಳಲಾಗಿದೆ. ನೆರೆ ಜಿಲ್ಲೆಗಳಿಂದ ಅಕ್ಕಿರಫ್ತು ಮಾಡಿಕೊಳ್ಳಲು ಕೆ.ಎಚ್.ಮುನಿಯಪ್ಪ ಅವರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಛತ್ತೀಸ್ ಘಡ ಅಥವಾ ತೆಲಂಗಾಣದಿಂದ ಅಕ್ಕಿ ಸರಬರಾಜಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ನೀಡಲಾಗುವುದಿಲ್ಲ ಎಂದು ತಿಳಿಸಿದೆ.ಆದರೆ ದಾಸ್ತಾನಿರುವ ಅಕ್ಕಿಮಾರಾಟಕ್ಕೆ ಖಾಸಗಿ ಅವರನ್ನು ಆಹ್ವಾನಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ರಾಜ್ಯದ ವಿಧಾನಸಭೆ ಚುನಾವಣೆ ನಂತರ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಉದ್ದೇಶ ಪೂರ್ವಕ ವಾಗಿಯೇ ಹೆಚ್ಚುವರಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿರುವುದು ಇದಕ್ಕೆ ನಿದರ್ಶನವಾಗಿದೆ.ಅಕ್ಕಿ ನೀಡಲು ಆಗದಿದ್ದರೆ ಆಯಾ ಪಡಿತರ ದಾರರ ಖಾತೆಗಳಿಗೆ ಹಣ ಹಾಕುವ ಕುರಿತು ಚಿಂತನೆ ಇದೆ ಆದರೆ ಪಡಿತರ ಅಕ್ಕಿ ಒದಗಿಸುವುದೇ ನಮ್ಮದೃಢವಾದ ನಿಲುವು ಎಂದು ಸ್ಪಷ್ಟಪಡಿಸಿದರು.
Tags
ಹಾಸನ