ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ಅರಳಿದ ಅರೇಹಳ್ಳಿ ಪ್ರತಿಭೆ

ಅರೇಹಳ್ಳಿ:  ಬೇಲೂರು ತಾಲೂಕಿನ ಅರೇಹಳ್ಳಿಯ ಹೊಸಪೇಟೆ ಬೀದಿಯಲ್ಲಿರುವ ಮಾರುತಿ ಸ್ಟುಡಿಯೋ ಮಾಲೀಕರಾದ ಗಂಗಾಧರ್ ಪ್ರಸಾದ್ ಹಾಗೂ ಕುಸುಮರವರ ಪುತ್ರಿಯಾದ ಸಂಕಲ್ಪ.ಜಿ(13)ರವರು ಉತ್ತರಾಖಂಡ್ ರಾಜ್ಯದ ಹರಿದ್ವಾರದ ಕೃಷ್ಣಪ್ರಿಯ ಕಥಕ್ ಕೇಂದ್ರದಲ್ಲಿ ಕೃಷ್ಣಪ್ರಿಯ ಮಹೋತ್ಸವ ಹಾಗೂ ಭಾಗೀರಥಿ ಉತ್ಸವದ ಸಂಗೀತ ಹಾಗೂ ನೃತ್ಯ ಸ್ಪರ್ಧೆಯ ಜೂನಿಯರ್ ಭರತನಾಟ್ಯ ವಿಭಾಗದಲ್ಲಿ ಪಾಲ್ಗೊಂಡು ಸೋಲೋ ನೃತ್ಯದಲ್ಲಿ ಪ್ರಥಮ ಹಾಗೂ ಗುಂಪು ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನವನ್ನು  ಪಡೆಯುವುದರ ಮೂಲಕ ಉತ್ತಮ ಸಾಧನೆ ತೋರಿದ್ದಾರೆ.

 ಪ್ರಸ್ತುತವಾಗಿ ಈ ಬಾಲ ಪ್ರತಿಭೆ ಚನ್ನರಾಯಪಟ್ಟಣ ತಾಲೂಕಿನ ಭರತನಾಟ್ಯ ಶಿಕ್ಷಕಿ ಶೈಲಜಾ ಕುಮಾರ್ ರವರ ಮಾರ್ಗದರ್ಶನದಲ್ಲಿ  ಬೇಲೂರಿನ ನೃತ್ಯಾಂಜಲಿ ಕಲಾನಿಕೇತನ ಕೇಂದ್ರದಲ್ಲಿ ನೃತ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ. ಅರೇಹಳ್ಳಿಯ ರಾಮನಗರದಲ್ಲಿರುವ ರೋಟರಿ ಶಾಲೆಯಲ್ಲಿ 7 ನೇ ತರಗತಿ ಓದುತ್ತಿರುವ ಇವರ ಸಾಧನೆಗೆ ಹೋಬಳಿಯ ಜನತೆ ಅಭಿನಂದಿಸಿದ್ದಾರೆ.         


Post a Comment

Previous Post Next Post