ಸಕಲೇಶಪುರದಲ್ಲಿ ಕೆಲವು ಪ್ರಭಾವಿಗಳು ಕೆರೆ ಗುಳುಂ ಮಾಡುವ ಸಂಚು

ಸಕಲೇಶಪುರದಲ್ಲಿ ಕೆಲವು ಪ್ರಭಾವಿಗಳು ಅಕ್ರಮವಾಗಿ ಕೆರೆಯನ್ನು ಮುಚ್ಚಲು ಮುಂದಾಗಿರುವ ಘಟನೆ ಮಳಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆ ಹಾಲೇಬೇಲೂರು ಅಂಡರ್ ಪಾಸ್ ಸಮೀಪ ಮಳಲಿಗ್ರಾಮ ಪಂಚಾಯತಿಯ ಕೊಲ್ಲಹಳ್ಳಿ ಗ್ರಾಮದ ಸರ್ವೆ ನಂ 64ರಲ್ಲಿ ಸುಮಾರು 1ಎಕರೆ 33ಗುಂಟೆ ಸರ್ಕಾರಿ ಕೆರೆಯಿದ್ದು ಕೆಲವು ಪ್ರಭಾವಿಗಳು ಅಕ್ರಮವಾಗಿ ಕೆರೆಯನ್ನು ಮುಚ್ಚಲು ಮುಂದಾಗಿದ್ದು ತಿಳಿದು ಗ್ರಾಮಸ್ಥರು ಕೆರೆಯನ್ನು ಒತ್ತುವರಿ ಮಾಡಲು ಮುಂದಾಗಿದ್ದವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಕಾರ್ಯಕರ್ತರ ಗಮನಕ್ಕೆ ತಂದು ತಕ್ಷಣವೇ ಸ್ಥಳದಲ್ಲಿ ಪ್ರತಿಭಟನೆ ಮಾಡಲು ಮುಂದಾದರು.

ವಿಷಯ ತಿಳಿದ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಬೇಟಿ ನೀಡಿ ಸಕಲೇಶಪುರ ಪರಿಶಿಲನೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್, ಶಿರಸ್ತೇದಾರ್ ಉಮೇಶ್, ಕಂದಾಯ ಇಲಾಖೆ ಇತರ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂಧರ್ಭದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೀವನ್, ತಾಲೂಕು ಅಧ್ಯಕ್ಷ ವಿಜಯ್ ಕೌಡಹಳ್ಳಿ, ಕಾನೂನು ಸಲಹೆಗಾರ ಪ್ರದೀಪ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಪದಾಧಿಕಾರಿಗಳಾದ ಮಹೇಶ್, ಸಂತು ಇತರರು ಹಾಜರಿದ್ದರು.

Post a Comment

Previous Post Next Post