ನಲ್ಲುಲ್ಲಿಯ ಕಳಪೆ ರಸ್ತೆ ಕಾಮಗಾರಿ:- ಗ್ರಾಮಸ್ಥರಿಂದ ಆಕ್ರೋಶ

ಸಕಲೇಶಪುರ:- ಸಕಲೇಶಪುರ ತಾಲೂಕು ಕುರಬತ್ತೂರು ಗ್ರಾಮಪಂಚಾಯಿತಿ ಕಾಮನಹಳ್ಳಿ ಕೂಡಿಗೆಯಿಂದ ನಲ್ಲುಲ್ಲಿ ವರೆಗೆ     ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-2 (Pmgsy yojane)  ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ರಸ್ತೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಕಾಮನಹಳ್ಳಿ ಕೂಡಿಗೆ ಇಂದ  ನಲ್ಲುಲ್ಲಿ ಊರಿನ ಕಡೆಗೆ ಹೋಗುವ ರಸ್ತೆಯನ್ನು ನೆನ್ನೆ ರಾತ್ರಿ ಸಮಯದಲ್ಲಿ ಕೆಲಸ ಶುರು ಮಾಡಿದ್ದು, ಇಂದು ಬೆಳಗಿನ ಜಾವ ಗ್ರಾಮಸ್ಥರು ರಸ್ತೆಯಲ್ಲಿ ತಿರುಗುವಾಗ ಡಾಂಬರೀಕರಣ ಮಾಡಿದ ರಸ್ತೆಯು ಕಿತ್ತು ಬರುತ್ತಿದ್ದು, ಇದರಿಂದ ಬೇಸರಗೊಂಡ ಗ್ರಾಮಸ್ಥರು ಕಾಮಗಾರಿ ಮಾಡುತ್ತಿದ್ದ ಇಂಜಿನಿಯರನ್ನು ಸಂಪರ್ಕಿಸಲು ಪ್ರಯತ್ನಿಸಿದರು ಸಂಪರ್ಕಕ್ಕೆ ಸಿಗುತ್ತಿಲ್ಲ, ಹಾಗೂ ಯಾವುದೇ ಕರೆಯನ್ನು ಸ್ವೀಕರಿಸದ ಕಾರಣ ಗ್ರಾಮಸ್ಥರು ಕೋಪಗೊಂಡು ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಕಾಮಗಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಕಳಪೆ ಕಾಮಗಾರಿ ನಿಲ್ಲಿಸಿ, ಒಳ್ಳೆ ಗುಣಮಟ್ಟದ ಕಾಮಗಾರಿಯನ್ನು ಮಾಡಿಕೊಡುವಂತೆ ಆಗ್ರಹಿಸಿದರು .ಇಲ್ಲವಾದರೆ ಭಾನುವಾರದಂದು ಯಡವರಹಳ್ಳಿ, , ನಲ್ಲುಲ್ಲಿ, ಕಾಮನಹಳ್ಳಿ, ನಡಹಳ್ಳಿ,ಊರಿನ ಗ್ರಾಮಸ್ಥರಿಂದ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.

Post a Comment

Previous Post Next Post