ಲಯನ್ಸ್ ಜಿಲ್ಲೆ 317ಡಿ ವತಿಯಿಂದ ಆಧುನಿಕ ಮಾದರಿಯಲ್ಲಿ ನವೀಕರಿಸಿದ ಹಿಂದೂ ಮುಕ್ತಿಧಾಮ ಲೋಕಾರ್ಪಣೆ

ಸಕಲೇಶಪುರ: ಲಯನ್ಸ್ ಜಿಲ್ಲೆ 317ಡಿ ವತಿಯಿಂದ ಸುಮಾರ 35 ಲಕ್ಷ ರೂಪಾಯಿ ವೆಚ್ಚದಲ್ಲಿ ಆಧುನಿಕ ಮಾದರಿಯಲ್ಲಿ  ನವೀಕರಿಸಿದ ಹಿಂದೂ ಮುಕ್ತಿಧಾಮ ವನ್ನು ಲೋಕಾರ್ಪಣೆ ಮಾಡಲಾಯಿತು.
     ಸಕಲೇಶಪುರ ತಾಲೂಕು ಕೇಂದ್ರದ ಹಿಂದೂ ಮುಕ್ತಿ ಧಾಮವನ್ನು  ಲಯನ್ಸ್ ಸಂಸ್ಥೆ ವತಿಯಿಂದ ಅಭಿವೃದ್ದಿ ಪಡಿಸಲಾಗಿದ್ದು ಶನಿವಾರದಂದು  ಮಂಗಳೂರು ಗುರು ಪುರ ವಜ್ರದೇಹಿ ಮಠದ ರಾಜ ಶೇಖರಾನಂದ ಸ್ವಾಮಿಜಿ ಅವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಆಶೀರ್ವಚನಾ ಭಾಷಣ ಮಾಡಿದ ಸ್ವಾಮಿಜಿಗಳು ಪ್ರತಿಯೊಬ್ಬ ವ್ಯಕ್ತಿಯನ್ನೂ ಕೂಡಸಮಾಜ ಗುರುತಿಸುವುದು ಅವನು ಮಾಡಿದ ಸೇವೆ ಮತ್ತು ಕೆಲಸಗಳಿಂದ  ಈ ನಿಟ್ಟಿನಲ್ಲಿ ಲಯನ್ಸಂಸ್ಧೆ ರಾಜ್ಯಪಾಲ ಸಂಜೀತ್ ಶೆಟ್ಟಿ   ಅವರ  ನೇತೃತ್ವದಲ್ಲಿ  ಲಯನಸ್ ಸಂಸ್ಧೆ ವತಿಯಿಂದ   ಹಿಂದೂ ಮುಕ್ತಿ ಧಾಮ ಆಧುನೀಕ ರೀತಿಯಲ್ಲಿ ನವೀಕರಿಸಿ ಸಮಾಜಕ್ಕೆ ಸಮರ್ಪಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.  
      ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಸ್ವತಹಾ ನಾನೂಕೂಡ ಲಯನ್ಸ್  ಸದಸ್ಯನಾಗಿ ಸಮಾಜದಲ್ಲಿ ಗುರುತಿಸಿಕ್ಕೊಂಡಿದೆ ಈ ದಿನ ಸಂಸ್ಧೆ ವತಿಯಿಂದ ನವೀಕರಿಸಲಾಗಿದ ಮುಕ್ತಿ ಧಾಮ  ಲೋಕಾರ್ಪಣೆ ಕ್ರ್ಯಕ್ರಮದಲ್ಲಿ ಭಗವಹಿಸುವುದರಲ್ಲಿ ಹೆಮ್ಮೆಯಿದೆ ಎಂದರು.
  ಲಯನ್ಸ್  ರಾಜ್ಯಪಾಲ ಸಂಜೀತ್ ಶೆಟ್ಟಿ ಮಾತನಾಡಿ ತಾನು ಅಂತಾರಾಷ್ಟ್ರೀಯ ಲಯನ್ ಸೇವಾ ಸಂಸ್ಧೆಯ ಜಿಲ್ಲೆ 317D         (ಹಾಸನ ,ಚಿಕ್ಕಮಂಗಳೂರು,ಕೊಡಗು ಮತ್ತು ಮಂಗಳೂರು ಕಂದಾಯ ಜಿಲ್ಲಾ ವ್ಯಾಪ್ತಿ)   ರಾಜ್ಯಪಾಲರಾಗಿ ಅಧಿಕಾರ ವಹಿಸಿಕ್ಕೊಂಡ ನಂತರ  ಪರಿಸರ ಸಂರಕ್ಷಣೆ,ಆರೋಗ್ಯಕ್ಷೇತ್ರದ ,ವಿದ್ಯಾಭ್ಯಾಸಕ್ಕೆ ನೆರವು ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಟ್ಟು ಕಾರ್ಯ ಮಿರ್ವಹಿಸುತ್ತಿದೆ ಎಂದರು.
ಪರಿಸರ ಸಂರಕ್ಷಣೆ ಕಾರ್ಯದಲ್ಲಿ ದಕ್ಷಿಣ ಕನ್ನಡ ಭಾಗದಲ್ಲಿ ಸುಮಾರು ೧೦‌ಸಾವಿರ ಮರಗಿಡಗಳು ರಸ್ತೆ ಬದಿಯಲ್ಲಿ ನೆಟ್ಟುಪೋಷಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ನೂರು ಕಂಪ್ಯೂಟರುಗಳನ್ನು ಉಚಿತವಾಗಿ ನೀಡಲಾಗಿದೆ, ನನ್ನ ಅಧಿಕಾರ ಬ್ಯಾಪ್ತಿಯಲ್ಲಿ  ಒಟ್ಟು ೦೪  ಡಯಾಲಿಸಿಸ್ ಕೇಂದ್ರಗಳನ್ನು ಸ್ಧಾಪಿಸಲಾಗಿದೆ, ಸಕಲೇಶಪುರ ಬಂಟರ ಸಂಘದ ಸಹಯೋಗದಲ್ಲಿ ಪಟ್ಟಣದಲ್ಲಿ ಒಂದು ಡಯಾಲಿಸಿಸ್ ಕೇಂದ್ರ ,  ಇಲ್ಲಿನ ಸರ್ಕಾರಿ ಆಸ್ಪತ್ರಿಯಲ್ಲಿ ೧೦ ಐಸಿಯು ಬೆಡ್ಡುಗಳ ಸಾಮರ್ಧ್ಯದ ಐಸಿಯು ವಾರ್ಡ್ ಈಗಾಗಲೇ ಪ್ರಗತಿಯಲ್ಲಿದೆ . ಸಕಲೇಶಪುರ ತಾಲೂಕು ಕೇಂದ್ರದ ಹಿಂದೂ ಮುಕ್ತಿ ಧಾಮವನ್ನು ಆಧುನೀಕ ಮಾದರಿಯಲ್ಲಿ  ನವೀಕರಿಸುವ ಗುರಿ ಹೊಂದಿ ಸುಮಾರು ೩೫ ಲಕ್ಷ ಹಣದಲ್ಲಿ  ಸುಸಜ್ಜಿತ ಮೂರು ಚಿತಾಗಾರ,ಶಿವ ಮತ್ತು ವಿಶ್ವಾಮಿತ್ರನ ಪ್ರತಿಮೆ ,ಸುಂದರ ಹೂತೋಟ ಸ್ವಚ್ಚಕುಡಿಯುವ ನೀರಿನ ವ್ಯವಸ್ಧೆ, ವಿಶ್ರಾಂತಿ ಕೊಟ್ಟಡಿ ,ಅಡುಗೆ ಕೋಣೆ ಹಾಗೂ ನಿರ್ಮಿಸಿ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು
 ಮಲ್ಟಿಪ್ಪಲ್ ಚೇರ್ಮಾನ್  ವಸಂತಕುಮಾರ್ ಶೆಟ್ಟಿ ,ಜಿಲ್ಲಾ ಸಂಪುಟ ಕಾರ್ಯದರ್ಶಿ ಅನಿಲ್ ಕುಮಾರ್, ಹಿಂದೂ ಮುಕ್ತಧಾಮ ಟ್ರಸ್ಟ್ ಅಧ್ಯಕ್ಷ ಜೈಮಾರುತಿ ದೇವರಾಜ್,ಕಾರ್ಯದರ್ಶಿ ಉಮೇಶ್  ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Post a Comment

Previous Post Next Post