ಸಕಲೇಶಪುರ ಸಾರ್ವಜನಿಕ ಶೌಚಾಲಯ ನೀರಿನ ಸಂಪಿನ ಮುಚ್ಚಳ ಹಾಕದೆ ಕೊಳಚೆ ನೀರು ಸೇರ್ಪಡೆ.
ಸಕಲೇಶಪುರ ಪಟ್ಟಣದ ಹಳೆ ಬಸ್ ಸ್ಟ್ಯಾಂಡ್ ಹಿಂಭಾಗದಲ್ಲಿ ನಿರ್ಮಾಣಗೊಂಡಿರುವ ಪುರಸಭೆಗೆ ಒಳಪಟ್ಟ ಕಟ್ಟಡದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ನಿರ್ಮಿಸಿರುವ ನೀರಿನ ಸಂಪಿಗೆ ಮುಚ್ಚಳ ಅಳವಡಿಸದೆ ತೆರೆದು ಕೊಂಡಿರುತ್ತದೆ, ಪಕ್ಕದ ಕಸದ ರಾಶಿ ಮೇಲೆ ಮಳೆ ನೀರು ಬಿದ್ದು ಕೊಳಚೆ ನೀರು ಸಂಪೂರ್ಣ ಸೊಂಪಿಗೆ ಸೇರುತ್ತದೆ, ಪಾನ ಮತ್ತ ಪುಡಾರಿಗಳು ಅಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ,ಇದೇ ನೀರನ್ನು ಸಾರ್ವಜನಿಕ ಶೌಚಾಲಯಕ್ಕೆ ಬಳ ಸಲಾಗುತಿರುವುದರಿಂದ ರೋಗ ರುಜನೆಗಳು ಬರುವುದರಲ್ಲಿ ಸಂದೇಹವೇ ಇಲ್ಲ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಳ್ಳದಿದ್ದಲ್ಲಿ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕುವುದಾಗಿ ಸ್ಥಳೀಯ ಜನಪ್ರತಿನಿಧಿಗಳು ತಿಳಿಸಿದ್ದಾರೆ.
Tags
ಸಕಲೇಶಪುರ