ಅರಕಲಗೂಡ ತಾಲೂಕಿನಲ್ಲಿ ವಿವಿಧ ಕಡೆ ಭೂಕಂಪನದ ಅನುಭವ

ಅರಕಲಗೂಡು: ತಾಲೂಕಿನಲ್ಲಿ  ಭೂಕಂಪನ ಸಂಭವಿಸಿದ್ದು ಕಸಬಾ ಹೋಬಳಿಯ ಮರವಳಲು. ಬೈಚನಹಳ್ಳಿ ಅರಕಲಗೂಡು ಪಟ್ಟಣ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ.
ಇಂದು ಬೆಳಿಗ್ಗೆ  ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅರಕಲಗೂಡು ಪಟ್ಟಣದಲ್ಲಿ ಬೆಳಿಗ್ಗೆ ಹಲವು ಕಡೆ 10.34 ರ ಸಮಯದಲ್ಲಿ ಭೂಮಿ ಕಂಪಿಸಿದೆ.
ಜನರಿಗೆ ಭೂಕಂಪನದ ಅನುಭವವಾಗಿದ್ದು ಮನೆಯಲ್ಲಿರುವ ಪಾತ್ರೆಗಳ ಶಬ್ದ ಕೇಳಿ ಗಾಬರಿಯಿಂದ ಮನೆಯಿಂದ ಹೊರಗೆ ಓಡಿ ಮಹಿಳೆಯರು. ಭೂಮಿ ಕಂಪಿಸಿದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿದ್ದು, ಭೂಕಂಪನದ ಅನುಭವದಿಂದ ಮನೆಯ ಹೊರಗಡೆಯೇ ಸ್ಥಳೀಯರು ನಿಂತಿದ್ದಾರೆ.
ಭೂಕಂಪನ ತೀವ್ರತೆ 2.2 ಎಂದು ಅಧಿಕಾರಿಗಳು ತಿಳಿಸಿರುತ್ತಾರೆ

Post a Comment

Previous Post Next Post