ಅಪರಿಚಿತ ವಾಹನ ಮುಖ್ಯ ವಿದ್ಯುತ್ ಕಂಬಕ್ಕೆ ಡಿಕ್ಕಿ: ಕತ್ತಲೆಯಲ್ಲಿ ಹಲವು ಬಡಾವಣೆಗಳು


ಸಕಲೇಶಪುರ: ಪಟ್ಟಣದ ಅರೇಹಳ್ಳಿ ರಸ್ತೆಯ ಬದಿಯಲ್ಲಿ ಮುಖ್ಯ ವಿದ್ಯುತ್ ಕಂಬವೊಂದಕ್ಕೆ ಮಿನಿ ಗೂಡ್ಸ್ ವಾಹನವೊಂದು ರಾತ್ರಿ 10.30ರ ವೇಳೆಯಲ್ಲಿ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ.ಆದರೆ ವಾಹನ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಅರ್ಧಕ್ಕೆ ಕಟ್ ಆಗಿ ವೈರ್ ಗಳು ಜೋತು ಬಿದ್ದಿವೆ. ಸ್ಥಳಕ್ಕೆ ಆಗಮಿಸಿದ ಲೈನ್ ಮ್ಯಾನ್ ಪ್ರಶಾಂತ್ ಕಂಬ ಅಳವಡಿಸಿ ವಿದ್ಯುತ್ ನೀಡಲು ಸೋಮವಾರ ಸಂಜೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಇದರಿಂದಾಗಿ ಪಟ್ಡಣದ ಅರೇಹಳ್ಳಿ ರಸ್ತೆ,ಆಚಂಗಿ,ಕುಡುಗರಹಳ್ಳಿ, ಅಜಾದ್ ರಸ್ತೆ ,ಮಲ್ಲಮ್ಮನ‌ ಬೀದಿ ಸೇರಿದಂತೆ ಹಲವು ಬಡಾವಣೆಗಳು ವಿದ್ಯುತ್ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Post a Comment

Previous Post Next Post