"ಗೋಪುರಕ್ಕೆ ಸಿಡಿಲು ಬಿಡಿತ - ದೇಗುಲದಿಂದ ಶುದ್ಧಿ ಕಾರ್ಯ"

ಬೇಲೂರು ;- ಕಳೆದ ಎರಡು ತಿಂಗಳ ಹಿಂದೆ ಬೇಲೂರು ಚನ್ನಕೇಶವಸ್ವಾಮಿ ದೇಗುಲದ ರಾಜ ಗೋಪುರಕ್ಕೆ  ಬರ ಸಿಡಿಲು ಬಿಡಿದ ಹಿನ್ನೆಲೆಯಲ್ಲಿ ಗೋಪುರದ ಕಳಸದ ಬಳಿ ಗಾರೆ ಚೂರು ಚೂರಾಗಿತ್ತು. ಎರಡು ತಿಂಗಳುನ ಕಳೆದರೂ ದೇಗುಲದ ಆಡಳಿತ ಸಿಡಿಲು ಬಿಡಿತಕ್ಕೆ ಯಾವುದೇ ಪೂಜೆ ಅಥವಾ ಹೊಮ ಹವನ ನಡೆಸಿಲ್ಲ. ಇದ್ದರಿಂದ ಮಳೆ ಇಲ್ಲವಾಗಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿತವಾದ ಬಳಿಕ ಎಚ್ಚರವಾದ ದೇಗುಲದ ವ್ಯವಸ್ಥಾಪನಾ ಸಮಿತಿ ಸ್ಥಳಿಯ ಶಾಸಕರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಸಿದರು.


ಚಿತ್ರ ೧(ಬಿ.ಎಲ್.ಆರ್.ಪಿ) ವಿಶ್ವ ಪ್ರಸಿದ್ಧ ಬೇಲೂರು ಚನ್ನಕೇಶವ ದೇಗುಲದ ಗೋಪುರಕ್ಕೆ ಸಿಡಲು ಬಿಡಿದ ಹಿನ್ನೆಲೆಯಲ್ಲಿ ಶುದ್ಧಿ ಕಾರ್ಯವನ್ನು ‌ನಡೆಸಲಾಯಿತು.

       ಬೆಳಿಗ್ಗೆನಿಂದಲೇ ಆರಂಭವಾದ ಪೂಜೆಯಲ್ಲಿ ದೇಗುಲದ ಆಗಮಿಕ ಪಂಡಿತರಾದ ಶ್ರೀನಿವಾಸಸ್ವಾಮಿ ಭಟ್ಟರ್ ಮತ್ತು ನರಸಿಂಹ ಭಟ್ಟರ್ ಲೋಕಕಲ್ಯಾಣರ್ಥ ಶಾಸಕ ಹೆಚ್.ಕೆ.ಸುರೇಶ್  ಪತ್ನಿ ಕೋಮಲ   ಅವರಿಂದ ಸಂಕಲ್ಪವನ್ನು‌ ನಡೆಸಿದರು. ಬಳಿಕ ವಿವಿಧ ಅಭಿಷೇಕ, ಹೊಮ ಹವನ ನಡೆಸಲಾಯಿತು. ತರುವಾಯ ಚನ್ನಕೇಶವಸ್ವಾಮಿ ಹೂವುಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮುನ್ನ ದೇಗುಲದ ರಾಜಗೋಪುರಕ್ಕೆ ಶುದ್ದೀಕಾರ್ಯವನ್ನು ನಡೆಸಿ ದೇಗುಲದಲ್ಲಿ ಗಂಟೆ ಜಾಗಟೆ ನಾದದೊಂದಿಗೆ ಮಹಾ ಮಂಗಳಾರತಿ ಮಾಡಿದರು. ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ದೇಗುಲದ ಪ್ರಧಾನ ಅರ್ಚಕ ಶ್ರೀನಿವಾಸಸ್ವಾಮಿಭಟ್ಟರ್,ಕಳೆದ ಏಪ್ರಿಲ್ ೨೦ ರಂದು ಬಿರುಗಾಳಿ ಮಳೆಯ ಸಿಡಿಲು ದೇಗುಲದ ರಾಜಗೋಪುರದ ಎಡ ಪಾಶ್ವಕ್ಕೆ ತೀವ್ರವಾಗಿ ಬಿಡಿದ ಹಿನ್ನೆಲೆಯಲ್ಲಿ ವಿಘ್ನವಾಗಿತ್ತು. ಗಾರೆ ವಿಭಿನ್ನದ ಕಾಯಕಲ್ಪ ನಡೆಸುವ ಮೊದಲು ಇಂದು ಆಗಮಕ ಶಾಸ್ತ್ರದ ಪ್ರಕಾರ ಶುದ್ದೀ ಕಾರ್ಯ ನಡೆಸಲಾಗಿದೆ. ಗೋಪುರದ ಕಾಯಕಲ್ಪ ‌ಮುಗಿದ ನಂತರದಲ್ಲಿ ಪುನಃ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದ ಅವರು ಶಾಸಕರು ಮಳೆಗಾಗಿ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದರು.



     ಶಾಸಕ ಹೆಚ್.ಕೆ.ಸುರೇಶ್ ಮಾತನಾಡಿ, ಬೇಲೂರು ಅಂತರಾಷ್ಟ್ರೀಯ ಪ್ರವಾಸಿ ತಾಣದ ಜೊತೆಗೆ ಇಲ್ಲಿನ ಭಕ್ತರ ಆರಾಧ್ಯ ದೈವವಾದ ಚನ್ನಕೇಶವಸ್ವಾಮಿ ಇಲ್ಲಿನ ಭಕ್ತರ ಪರಮ ದೈವವಾಗಿದೆ. ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇಗುಲದ ರಾಜ ಗೋಪುರಕ್ಕೆ ಕಳೆದ ಎರಡು ತಿಂಗಳ ಹಿಂದೆ ಸಿಡಿಲು ಬಿಡಿತದಿಂದ ಗೋಪುರದ ಕಳಸದ ಬಳಿ ಭಿನ್ನವಾಗಿದೆ.ಅಂದಿನಿಂದ ಶುದ್ಧಿ ಕಾರ್ಯ ನಡೆಸಿಲ್ಲ. ಇದ್ದರಿಂದ ಮಳೆ ದೂರವಾಗಿದೆ ಎಂದು ಭಕ್ತರ ಅಭಿಪ್ರಾಯವಾಗಿತ್ತು. ಈ ಕಾರಣದಿಂದ ಇಲ್ಲಿನ ಆಗಮಿಕ ಪಂಡಿತರಿಂದ ದಿನವನ್ನು ನಿಗಧಿ ಮಾಡಿದ್ದು, ಬೆಳಿಗ್ಗಿನಿಂದ ಚನ್ನಕೇಶವಸ್ವಾಮಿಗೆ ವಿಶೇಷವಾದ ಪೂಜೆಯನ್ನು ನಡೆಸಲಾಗಿದೆ. ಲೋಕಕಲ್ಯಾಣರ್ಥವಾಗಿ ನಾವುಗಳು ಕೂಡ ವರುಣನ ಆಗಮನಕ್ಕಾಗಿ  ವಿಶೇಷ ಸಂಕಲ್ಪ ಮತ್ತು ಪೂಜೆ ನಡೆಸಲಾಗಿದೆ ಈ ಕಾರ್ಯದಲ್ಲಿ ಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ನಾರಾಯಣಸ್ವಾಮಿ ಮತ್ತು ತಹಶೀಲ್ದಾರ್ ‌ಮಮತರವರು ಮತ್ತು ದೇಗುಲದ ಅರ್ಚರು ಸಹಕಾರದಿಂದ ಉತ್ತಮ ಕಾರ್ಯ ನಡೆಲಾಗಿದೆ ನಾಡಿನಲ್ಲಿ ರೈತರು ಸೇರಿದಂತೆ ಎಲ್ಲ ವರ್ಗದವರು ನೆಮ್ಮದಿಯಿಂದ ಬಾಳಲಿ ಎಂದರು.


   ಈ ಸಂದರ್ಭದಲ್ಲಿ ಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ತಹಶೀಲ್ದಾರ್ ಎಂ.ಮಮತ, ಸಮಿತಿ ಸದಸ್ಯರಾದ ರವಿಶಂಕರ್, ರವೀಂದ್ರ, ವಿಜಯಲಕ್ಷ್ಮಿ, ಪ್ರಮೋದ್ , ಪುರಸಭಾ ಸದಸ್ಯ ಶ್ರೀನಿವಾಸ್, ಅರ್ಚಕರಾದ ಶ್ರೀನಿವಾಸಸ್ವಾಮಿ ಭಟ್ಟರ್ ಮತ್ತು ನರಸಿಂಹಸ್ವಾಮಿ ಭಟ್ಟರ್ ಇನ್ನೂ ಮುಂತಾದವರು ಹಾಜರಿದ್ದರು.

Post a Comment

Previous Post Next Post