ಬೇಲೂರಿನಲ್ಲಿ ತ್ಯಾಗ ಬಲಿದಾನ ಸಂಕೇತವಾದ ಬಕ್ರಿದ್ ಹಬ್ಬ ಆಚರಣೆ

ಬೇಲೂರು ಹೂ ರವಲಯದ ಗೆಂಡೆಹಳ್ಳಿ ರಸ್ತೆಯಲ್ಲಿರುವ  ಈದ್ಗ ಮೈದಾನದಲ್ಲಿ ಇಂದು ಬೇಲೂರು ಪಟ್ಟಣದ ಮುಸಲ್ಮಾನ್ ಬಾಂಧವರು ತ್ಯಾಗ ಬಲಿದಾನ ಬಕ್ತಿ  ಕರುಣೆ ಸ್ನೇಹ ಸೌಹಾರ್ದತೆ ಮಾನವೀಯತೆಯು. ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಹಬ್ಬವು ನಾಡಿನಲ್ಲಿ ಸ್ನೇಹ ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡುವಬಕ್ರೀದ್ ಹಬ್ಬದ ಅಂಗವಾಗಿ. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು..
 ಕೋಟೆ ಮಸೀದಿಯ ಗುರುಗಳಾದ ಮೌಲಾನ ಇರ್ಫಾನ್ ರಜಾ ರವರನಾಯಕತ್ವದಲ್ಲಿ. ಈದ್ಗಾ ಮೈದಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಮತ್ತು ರಾಜ್ಯದಲ್ಲಿ ಮಳೆ ಬೆಳೆ ಉತ್ತಮವಾಲಿ. ಜನಜೀವನ ಸಮೃದ್ಧಿಯಾಗಲಿ. ಸೌಹಾರ್ದತೆಯಿಂದ ಸಹೋದರರಂತೆ ಎಲ್ಲರೂ ಜೀವಿಸಲಿ. ಎಂದು ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಸಂದರ್ಭದಲ್ಲಿ ಮಳೆ ರಾಯನ ಆಗಮನವಾಯಿತು. ಮಳೆ ಬಂದರೂ ಸಹ ಭಕ್ತಾದಿಗಳು ಮಳೆಯಲ್ಲೇ ನೆನೆದುಕೊಂಡು ಲೋಕ ಕಲ್ಯಾಣಕ್ಕೆ ಪ್ರಾರ್ಥನೆ ಸಲ್ಲಿಸುತ್ತಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ. ಹಿರಿಯರು ಮತ್ತು ಪುಟ್ಟ ಪುಟ್ಟ ಮಕ್ಕಳು ಹಸ್ತಲಾಗು ಮಾಡಿ  ಸಿಹಿ ಹಂಚಿ ಸಂಭ್ರಮಿಸಿದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ.ಬೇಲೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ರವಿಕಿರಣ್ ರವರ ನೇತೃತ್ವದಲ್ಲಿ. ಬಿಗಿ ಪೊಲೀಸ್ ಬಂದುಬಸ್ತು  ಏರ್ಪಡಿಸಲಾಗಿತ್ತು.

Post a Comment

Previous Post Next Post