ಕ್ಷುಲ್ಲಕ ಕಾರಣಕ್ಕೆ ಸಹೋದರರ ನಡುವೆ ಜಗಳ: ಸಿಟ್ಟಿನಲ್ಲಿ ತಮ್ಮನ ಜೀವವನ್ನೇ ತೆಗೆದ ಅಣ್ಣ

ಹಾಸನ: ಕ್ಷುಲ್ಲಕ ಕಾರಣಕ್ಕೆ ಅಣ್ಣ ತಮ್ಮನ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಅರಸೀಕೆರೆ ತಾಲ್ಲೂಕಿನ ದುಮ್ಮೇನಹಳ್ಳಿ ಕಾಲೋನಿಯಲ್ಲಿ ನಡೆದಿದೆ. ಯತೀಶ್ (37) ಕೊಲೆಯಾದ ವ್ಯಕ್ತಿ.


ಆರೋಪಿ ಅಣ್ಣ ಹನುಮಂತಯ್ಯ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದನಂತೆ.


ನಿನ್ನೆ ಕೂಡ ಯತೀಶ್​ ಮನೆಯ ಹೊರಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಕುಸಿದ ಮತ್ತಿನಲ್ಲಿ ಹನುಮಂತಯ್ಯ ಏಕಾಏಕಿ ಚಾಕುವನ್ನು ಹಿಡಿದುಕೊಂಡು ಬಂದು ನನಗೆ ಬೈಯುತ್ತಿದ್ದೀಯಾ ಎಂದು ತಮ್ಮನ ಮೇಲೆ ಎರಗಿದ್ದಾನೆ.


ಅಣ್ಣ-ತಮ್ಮನ ನಡುವೆ ಗಲಾಟೆ ಅತಿರೇಕಕ್ಕೆ ಹೋಗಿ ಕೊನೆಗೆ ತಮ್ಮನನ್ನೇ ಅಣ್ಣ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಆರೋಪಿ ಅಣ್ಣನನ್ನು ಅರೆಸ್ಟ್​​ ಮಾಡಿದ್ದಾರೆ.

Post a Comment

Previous Post Next Post