ಜಾವಗಲ್ : ಸಮೀಪದ ದೊಡ್ಡ ಕೋಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ವೆ ನಂ 142 ರಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಗಣಿಗಾರಿಕೆಯಿಂದ ಅನೇಕ ಮನೆಗಳು ಹಾಗೂ ಸರ್ಕಾರಿ ಶಾಲೆಗಳು ಬಿರುಕು ಬಿಡುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ ಗಣಿಗಾರಿಕೆಗೆ ಸಿಡಿ ಮದ್ದು ಬಳಸುವುದರಿಂದ ಭೂಮಿ ಕಂಪಿಸಿ ಮನೆಗಳಲ್ಲಿ ಪದಾರ್ಥಗಳು ಹಾಳಾಗುತ್ತಿದೆ ಗಣಿಗಾರಿಕೆಗೆ ಹತ್ತಿರವಾಗಿ ಸರ್ಕಾರಿ ಶಾಲೆ ಇರುವುದರಿಂದ ದಿನನಿತ್ಯ ಗಣಿಗಾರಿಕೆ ವಾಹನಗಳಾದ ಜೆ ಸಿ ಬಿ,ಲಾರಿ ನಿತ್ಯ ಸಂಚಾರ ಮಾಡುವುದರಿಂದ ಧೂಳುಮಯ ವಾತಾವರಣ ಹಾಗೂ ಶಬ್ದ ಮಾಲಿನ್ಯದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ ,ಅನೇಕ ವರ್ಷಗಳಿಂದ ಇಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದ ಭೂಮಿಯು ಆಳಕ್ಕೆ ಹೋಗಿರುವುದರಿಂದ ಅಂತರ್ಜಲ ಮಟ್ಟ ಕುಸಿದು ರೈತಾಪಿ ವರ್ಗದವರ ಬೊರವೆಲ್ ಗಳಲ್ಲಿ ನೀರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ವಿಷಯಗಳನ್ನು ಗಮದಲ್ಲಿಟ್ಟು ಕೊಂಡು ಯಾವುದೇ ಕಾರಣಕ್ಕೂ ಕಲ್ಲುಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದಾಗಿ ಗ್ರಾಮ ಪಂಚಾಯತಿ ಮೂಲಕ ಸರ್ಕಾರಕ್ಕೆ ದೊಡ್ಡಕೋಡಿಹಳ್ಳಿ ಸೂರನಾಯಕನಹಳ್ಳಿ ಮಾರೇನಹಳ್ಳಿ ಗ್ರಾಮಸ್ಥರು ಮನವಿ ಮಾಡಿದ್ದು ರಾಜಕೀಯ ಒತ್ತಡಗಳಿಂದ ಕಾನೂನು ಬಾಹಿರವಾಗಿ ಗಣಿಗಾರಿಕೆಗೆ ಮತ್ತೆ ಅವಕಾಶ ನೀಡಿದರೆ ಮೂರು ಗ್ರಾಮಗಳ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ಉಗ್ರ ಹೋರಾಟ ಮಾಡುವುದಾಗಿ ಗ್ರಾಮ ಪಂಚಾಯತಿ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪಿ ಡಿ ಓ ಜಿತೇಂದ್ರ.ಗ್ರಾಮಸ್ಥರಾದ ವಿನೋದ್ ಕುಮಾರ್. ಸತೀಶ್. ಅಶೋಕ್ . ನಟರಾಜ್. ಸೂರ್ಯನಾಯಕನಹಳ್ಳಿ ಗ್ರಾಮಸ್ಥರಾದ ಅಶೋಕ್ ಮತ್ತಿತರರು ಉಪಸ್ಥಿತಿಯಿದ್ದರು
ಹಾಸನ ಜಿಲ್ಲೆ ವ್ಯಾಪ್ತಿಯ ಸುದ್ದಿಗಳ ಪ್ರಕಟಣೆಗೆ ಸುದ್ದಿಯನ್ನು hassansimenews@gmail.com ಗೆ ಇ- ಮೇಲ್ ಕಳುಹಿಸಿ.
ಹಾಸನ ಜಿಲ್ಲೆಯ ಡಿಜಿಟಲ್ ವೆಬ್ ಚಾನಲ್ ಇನ್ನಷ್ಟು ಅಪ್ಡೇಟ್ ಗಳಿಗಾಗಿ ಹಾಸನ ಸೀಮೆ ಸದಸ್ಯತ್ವ ಪಡೆಯಲು ಈ ಕೆಳಗಿನ ಲಿಂಕ್ ಸ್ಪರ್ಶಿಸಿ
👇👇👇
Tags
ಅರಸೀಕೆರೆ