ನಗರದ ಹೊಸಲೈನ್ ರಸ್ತೆ, ಪೊಲೀಸ್ ಕ್ವಾಟ್ರಸ್ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ೩೭ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಎರಡನೇ ದಿನದ ಪೂಜ ಕಾರ್ಯಕ್ರಮದಲ್ಲಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ, ಚಂಡಿಕಾ ಹೋಮ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮವು ಯಶ್ವಿಯಾಗಿ ಜರುಗಿತು. ಶುಕ್ರವಾರದಂದು ಬೆಳಿಗ್ಗೆ ೮ ಗಂಟೆಯಿಂದ ಅಮ್ಮನವರಿಗೆ
ಮಹಾಭೀಷೇಕ, ೮:೩೦ ರಿಂದ ಗಣಪತಿ ನವಗ್ರಹ ಸಹಿತ ಶ್ರೀ ಚಂಡಿಕಾ ಹೋಮ, ನಡೆದು ಮದ್ಯಾಹ್ನ ೧೨: ೩೦ಕ್ಕೆ ಪೂಣಾಹುತಿ ನೆರವೇರಿತು.ನಂತರ ಮಹಾ ಮಂಗಳಾರತಿಯೊಂದಿಗೆ ಪೂಜ ವಿಧಿವಿದಾನಗಳು ಪೂರ್ಣಗೊಂಡಿತು.ನಂತರದಲ್ಲಿ ಬಂದ ಸಾವಿರಾರು ಜನ ಭಕ್ತರಿಗೆ ಅನ್ನದ ರೂಪದಲ್ಲಿ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕ ಇತರರು ಉಪಸ್ಥಿತರಿದ್ದರು.
Tags
ಹಾಸನ