ಪಟ್ಟಣದ ಯಲ್ಲಮ್ಮದೇವಸ್ಥಾನದ ಬಳಿ ನಿಲ್ಲಿಸಿದ್ದ ಕಾರನ್ನು ಕಳವು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ನಗರದ ಸ್ವೀಪರ್ ಕಾಲೊನಿ ನಿವಾಸಿ ರೇಣುಕನಾಥ
ಅವರು ತಮ್ಮಕಾರನ್ನು ದೇವಸ್ಥಾನದ ಹತ್ತಿರ ನಿಲ್ಲಿಸಿದ್ದರು.
ಗೆಳೆಯರು ಮನೆಯಲ್ಲಿ ಮಾತುಕತೆ ಮುಗಿಸಿ ಬಳಿಕ ಕಾರು ನಿಲ್ಲಿಸಿದ್ದ ಸ್ಥಾನಕ್ಕೆ ವಾಪಸ್ ಬಂದು ನೋಡಿದಾಗ ಕಾರು ಇರಲಿಲ್ಲ.ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. 4, 67,541 ಮೌಲ್ಯದ ಕಾರನ್ನು ಪತ್ತೆ ಮಾಡಿಕೊಡಬೇಕೆಂದು ರೇಣುಕನಾಥ ದೂರು ನೀಡಿದ್ದಾರೆ. ಅರಸೀಕೆರೆ ನಗರ ಪೊಲೀಸ್
ಠಾಣೆಯಲ್ಲಿ ದೂರು ದಾಖಲಾಗಿದೆ.