ಬುಧವಾರದಂದು ರಾತ್ರಿ ಸುಮಾರು ೧೦ ಗಂಟೆ ಸಮಯದಲ್ಲಿ ಇಬ್ಬರು ರಿಯಾನ್ 17 ವರ್ಷ ಮತ್ತು ಶಾಕೀರ್ ೨೪ ವರ್ಷ ಎಂಬುವರು ವೀಲಿಂಗ್ ಮಾಡಿಕೊಂಡು ಅತೀ ವೇಗವಾಗಿ ಬರುತ್ತಿದ್ದಾಗ ಎದುರಿನಿಂದ ಪುಟ್ ಬಾತ್ ಕಡೆ ಬೈಕ್ ನಲ್ಲಿ ನಿಧಾನವಾಗಿ ಬರುತ್ತಿದ್ದ ಮಹಿಳೆಯರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಕೆಳಗೆ ಬಿದ್ದು ಅವರ ಮೇಲೆ ಬೈಕ್ ಹರಿದ ಪರಿಣಾಮ ತೀವ್ರತರವಾದ ಗಾಯಗಳಾದ ಘಟನೆ ಮಹಾರಾಜ ಪಾರ್ಕ್ ಪುಟ್ ಕೋರ್ಟ್ ರಸ್ತೆಯಲ್ಲಿ ನಡೆದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವೀಲಿಂಗ್ ಮಾಡುವವರ ಮತು ಕರ್ಕಶ ಸೌಂಡ್ ಮಾಡುವವರ ಬಗ್ಗೆ ಹೆಚ್ಚಿನ ಗಮನ ನೀಡಿ ಕ್ರಮಕೈಗೊಂಡಿದ್ದರೂ ದಿನ ದಿನೆ ವೀಲಿಂಗ್ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಬುಧವಾರದಂದು ರಾತ್ರಿ ಸುಮಾರು ೧೦ ಗಂಟೆಯ ವೇಳೆ ಇಬ್ಬರೂ ಮುಸ್ಲಿಂ ಯುವಕರು ಅತೀ ವೇಗದಲ್ಲಿ ವೀಲಿಂಗ್ ಮಾಡಿಕೊಂಡು ನಗರದ ಸಹ್ಯಾದ್ರಿ ರಸ್ತೆ, ಪುಡ್ ಕೋರ್ಟ್ ಎದುರು ಬರುತ್ತಿದ್ದು, ಈ ವೇಳೆ ಎದುರಿನಿಂದ ಇಬ್ಬರೂ ಮಹಿಳೆಯರು ನಿದಾನವಾಗಿ ಪುಟ್ ಬಾತ್ ರಸ್ತೆಯ ಕಡೆಯಿಂದ ಬರುತ್ತಿದ್ದಾಗ ಅವರ ಮೇಲೆ ಬೈಕ್ ಹತ್ತಿಸಿದ್ದು, ಈ ವೇಳೆ ಕೆಳಕೆ ಬಿದ್ದು ಇಬ್ಬರೂ ಮಹಿಳೆಯರು ರಸ್ತೆ ಮೇಲೆ ತೀವ್ರ ಗಾಯಗಳಾಗಿ ಒದ್ದಾಡಿದ್ದಾರೆ. ತಕ್ಷಣ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಅವರಿಬ್ಬರನ್ನು ಸಾಗಿಸಲಾಯಿತು. ಭೂಮಿಕ ಮತ್ತು ಸಿಂಚನಾ ಅಪಘಾತದಲ್ಲಿ ಗಾಯಗೊಂಡವರು.
ಸ್ಥಳದಲ್ಲಿದ್ದ ಸಾರ್ವಜನಿಕರು ವೀಲಿಂಗ್ ಮಾಡುವವರ ವಿರುದ್ಧ ಮಾಡಿ ಕೆಲ ಸಮಯ ಥಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ವೀಲಿಂಗ್ ಮಾಡುವವರನ್ನು ಹಿಡಿದು ಒಂದು ಆಟೋ ಮೂಲಕ ಪೊಲೀಸ್ ಠಾಣೆಗೆ ಸಾಗಿಸಿದ್ದಾರೆ. ಸಿಟ್ಟಿಗೆದ್ದ ಸಾರ್ವಜನಿಕರು ವೀಲಿಂಗ್ ಮಾಡುವವರ ಬಟ್ಟೆಗೆ ಬೆಂಕಿ ಹಾಕಿದ್ದಾರೆ. ಇನ್ನೆನು ಬೈಕಿಗೆ ಬೆಂಕಿ ಹಾಕಬೇಕು ಅನ್ನುವಷ್ಟರಲ್ಲಿ ಪೊಲೀಸ್ ಅಧಿಕಾರಿ ಕುಮಾರ್ ಸ್ಥಳಕ್ಕೆ ಬಂದು ಆಗುತ್ತಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ನಂತರದಲ್ಲಿ ಬಂದ ಪೊಲೀಸ್ ಅಧಿಕಾರಿ ರೇವಣ್ಣ ಅವರು ಪುಡ್ ಪಾರ್ಕ್ ತಿಂಡಿ ಗಾಡಿಗಳ ಬಂದ್ ಮಾಡಲು ಸೂಚಿಸಿದರು. ಇವರಿಬ್ಬರೂ ಗಾಂಜ ಸೇವನೆ ಮಾಡಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.