ಸರಕಾರಿ ಕಚೇರಿಗಳಿಗೆ ಬರುವ ಜನ ಸಾಮಾನ್ಯರನ್ನು ಗೌರವಿತವಾಗಿ ನಡೆಸಿಕೊಳ್ಳಿ : ಶಾಸಕ ಸಿಮೆಂಟ್‌ ಮಂಜು

 ಕಟ್ಟಾಯ :  ರೈತರಿಗೆ ತೊಂದರೆ ಆಗಬಾರದು ಸರ್ಕಾರದ ಸವಲತ್ತುಗಳನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು ನನ್ನ  ಕರ್ತವ್ಯವಾಗಿದೆ ಸರಕಾರಿ ಕಚೇರಿಗಳಿಗೆ ಬರುವ ಜನ ಸಾಮಾನ್ಯರನ್ನು ಗೌರವಿತವಾಗಿ ನಡೆಸಿಕೊಳ್ಳಿ ಯಾಕೆಂದರೆ ಬಹುಸಂಖ್ಯಾತ ಅವರೆಲ್ಲರೂ ಅನಕ್ಷರಸ್ಥರಾಗಿರುತ್ತಾರೆ ಆದ್ದರಿಂದ ಅವರೊಂದಿಗೆ  ಸೌಜನ್ಯೊಂದಿಗೆ ವರ್ತಿಸಿ ಅವರಿಗೆ ಯಾವುದೇ ರೀತಿ ಅಡೆತಡೆಗಳು ಆಗದಂತೆ ಕೆಲಸ ಮಾಡಬೇಕು  ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು ತಿಳಿಸಿದರು  .



    ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನೆಡೆದ ಗ್ರಾಮ ಸಭೆಯನ್ನು ಉದ್ಘಾಟನೆ  ಮಾಡಿ ಹಾಗೂ ಸನ್ಮಾನ ಸ್ವೀಕರಿಸಿ  ಮಾತನಾಡಿದ ಶಾಸಕರಾದ ಮಂಜುನಾಥ್ ರವರು ಸರ್ಕಾರದ ಸವಲತ್ತುಗಳು ಪ್ರತಿಯೊಬ್ಬರಿಗೆ ತಲುಪುವಂತೆ ಮಾಡುವುದೇ ನನ್ನ ಆದ್ಯ ಕರ್ತವ್ಯವಾಗಿದೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕಿದೆ ಅದರಿಂದ ಅಧಿಕಾರಿಗಳೆಲ್ಲರ ಕೈ ಜೋಡಿಸಿ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.



ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಅಧಿಕಾರಿ  ಸತೀಶ್ ತಾಲೂಕು ಪಂಚಾಯಿತಿಯ ಸಹಾಯಕ ನಿರ್ದೇಶಕ ನಟರಾಜ್, ಕಂದಾಯ ಅಧಿಕಾರಿ ಗಂಗಾಧರ್, ಉಪವಲಯ ಅರಣ್ಯ  ಅಧಿಕಾರಿ  ಧನಂಜಯ್ ಉಪ ತಹಶೀಲ್ದಾರ್ ಗಂಗಾಧರ್, ರಾಜಸ್ವ ನಿರೀಕ್ಷಕ ಕಿರಣ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿ ವಿಶಾಲಾಕ್ಷಿ ತೋಟಗಾರಿಕೆ ಇಲಾಖೆ ಅಧಿಕಾರಿ ಆನ್ಸರ್  ಇನ್ನಿತರ ಅಧಿಕಾರಿಗಳು ಹಾಜರಿದ್ದಾರು. 

Post a Comment

Previous Post Next Post