ಮನೆಯ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು, ಬೀರುವಿನಲ್ಲಿಟ್ಟಿದ್ದ ನಗದು ಹಣ ಹಾಗು ಚಿನ್ನಾಭರಣಗಳ ಕಳವು



ಬೇಲೂರು ತಾ. ಹಳೇಬೀಡು ಹೋ. ಗೋಣಿಸೋಮೇನಹಳ್ಳಿ ಗ್ರಾಮದ ವಾಸಿಯಾದ ಹೇಮಂತಕುಮರ ಬಿನ್ ಮಲ್ಲೇಶಪ್ಪರವರು ತಮ್ಮ ಮನೆಯವರೊಂದಿಗೆ ಆಂದ್ರಪ್ರದೇಶ ರಾಜ್ಯದಲ್ಲಿ ಬೇಕರಿ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದುಕೊಂಡಿದ್ದು, ದಿನಾಂಕ:08/05/2023 ರಂದು ಮಲ್ಲೇಶಪ್ಪರವರು ಗೋಣಿಸೋಮೇನಹಳ್ಳಿ ಗ್ರಾಮದ ತಮ್ಮ ಮನೆಗೆ ಬಂದು, ವಿಧಾನಸಭಾ ಚುನಾವಣೆ ಮುಗಿಸಿಕೊಂಡು, ದಿನಾಂಕ:18/06/2023 ರಂದು ವಾಪಸ್ ಆಂಧ್ರಪ್ರದೇಶಕ್ಕೆ ಹೋಗಿದ್ದು, ಹೋಗುವಾಗ ಸುಮಾರು 30ಗ್ರಾಂ ತೂಕದ ಚಿನ್ನದ ಕೊರಳ ಚೈನ್ ಹಾಗು 1,30,000/- ನಗದು ಹಣವನ್ನು ಬೀರುವಿನಲ್ಲಿಟ್ಟು ಹೋಗಿದ್ದು, ದಿನಾಂಕ:30/06/2023 ರಂದು ಬೆಳಿಗ್ಗೆ 10:00 ಗಂಟೆ ಸಮಯದಲ್ಲಿ ಹೇಮಂತಕುಮಾರರವರು ಆಂಧ್ರಪ್ರದೇಶ ರಾಜ್ಯದಿಂದ ಗೋಣಿಸೋಮೇನಹಳ್ಳಿ ಗ್ರಾಮದ ತಮ್ಮ ಮನೆಗೆ ಬಂದು ಬೀಗ ತೆಗೆದು ನೋಡಿದಾಗ ಮನೆಯ ಮೇಲ್ಛಾವಣಿಯ ಹೆಂಚುಗಳನ್ನು ಯಾರೋ ಕಳ್ಳರು ತೆಗೆದು ಬೀರುವಿನಲ್ಲಿಟ್ಟಿದ್ದ ಸುಮಾರು 30ಗ್ರಾಂ ತೂಕದ ಅಂದಾಜು ಬೆಲೆ 1,50ಲಕ್ಷ ಬೆಲೆಬಾಳುವ ಚಿನ್ನದ ಕೊರಳ ಚೈನ್ ಹಾಗು 1,30,000/- ನಗದು ಹಣವನ್ನು ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವು ಮಾಡಿರುವವರನ್ನು ಪತ್ತೆಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ದಿನಾಂಕ:30/06/2023 ರಂದು ಹಳೇಬೀಡು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.

Post a Comment

Previous Post Next Post