ಅರಸೀಕೆರೆ :- ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ 91 ಅಂಕಗಳೊಂದಿಗೆ ಉತ್ತರ‍್ಣಳಾಗಿರುವ ಪತ್ರರ‍್ತ ಪ್ರಸಾದ್ ಅವರ ಮಗಳು ಸಾರಿಕಾ ಪಿ.ರಾಜ್ಯ ಕರ‍್ಯನಿರತ ಪತ್ರರ‍್ತರ ಸಂಘ ಹಾಗೂ ಉಡುಪಿ ಜಿಲ್ಲಾ ಕರ‍್ಯನಿರತ ಪತ್ರರ‍್ತರ ಸಂಘದ ಪ್ರತಿಭಾ ಪುರಸ್ಕಾರಕ್ಕೆ ಬಾಜನರಾಗುವ ಮೂಲಕ ತನ್ನ ಪೋಷಕರು ಹಾಗೂ ತಾಲೂಕು ಕರ‍್ಯನಿರತ ಪತ್ರರ‍್ತರ ಸಂಘಕ್ಕೆ ಕರ‍್ತಿ ತಂದಿದ್ದಾಳೆ.
ಈ ಕುರಿತು ಪತ್ರಿಕೆಯೊಂದಿಗೆ ತನ್ನ ಸಂತಸವನ್ನು ಹಂಚಿಕೊಂಡ ಸಾರಿಕಾ ವಿಧಾನ ಸಭೆಯ ಸಭಾಪತಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್,ಹಾಗೂ ನಮ್ಮೆಲ್ಲರ ನೆಚ್ಚಿನ ರಾಜ್ಯ ಕರ‍್ಯನಿರತ ಪತ್ರರ‍್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅಂಕಲ್ ಅವರಿಂದ ಸನ್ಮಾನ ಮಾಡಿಸಿಕೊಂಡಿರುವುದಕ್ಕೆ ಅತಿವ ಸಂತಸವಾಗುತ್ತಿದೆ ಅಲ್ಲದೆ ನನ್ನ ಅಪ್ಪ ಅಮ್ಮ ನನ್ನ ಭವಿಷ್ಯದ ಬಗ್ಗೆ ಕನಸು ಕಂಡಿರುವಂತೆ ನನಸು ಮಾಡಲು ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದ್ದು ಒಬ್ಬ ಪತ್ರರ‍್ತನ ಮಗಳಾಗಿ ಸಮಾಜಮುಖಿ ಸೇವೆಗೆ ನನ್ನ ವಿದ್ಯಾಭ್ಯಾಸದ ಮೂಲಕ ಸಾಧಿಸಿಯೇ ತೀರುವುದಾಗಿ ವಿಶ್ವಾಸ ವ್ಯಕ್ತಪಡಿಸಿದಳು.
ಮಗಳ ಸಾಧನೆ ಕುರಿತು ಪತ್ರರ‍್ತ ಪ್ರಸಾದ್ ಮಾತನಾಡಿ ಸಂಘ ಎನ್ನುವುದು ಸಂಬಂಧಕ್ಕಿಂತ ದೊಡ್ಡದಾಗಿದೆ ಶಿವಾನಂದ ತಗಡೂರು ಅವರ ವಿಶಾಲ ಚಿಂತನೆ ಸಂಘಟನಾ ಮನೋಭಾವ ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿ ಕರ‍್ಯನರ‍್ವಹಿಸುತ್ತಿರುವ ಎಲ್ಲಾ ಪತ್ರರ‍್ತರು ಒಂದೇ ಕುಟುಂಬ ಎನ್ನುವ ಮನೋಭಾವ ಮೂಡುತ್ತಿರುವುದು ಸಂತಸದ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಿಕೆಯೊಂದಿಗೆ ರಾಜ್ಯ ಕರ‍್ಯನಿರತ ಪತ್ರರ‍್ತ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ಪತ್ರರ‍್ತನ ಸೇವೆ ಮಾತ್ರ ಅಲ್ಲ ಆತನ ಕುಟುಂಬ ಪರಿವಾರದ ಅವರ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಾಲೂಕು ಹಾಗೂ ಜಿಲ್ಲಾ ಸಂಘಗಳ ಸಹಕಾರದೊಂದಿಗೆ ರಾಜ್ಯ ಪತ್ರರ‍್ತರ ಸಂಘ ಹಲವು ಕರ‍್ಯಕ್ರಮಗಳನ್ನು ರೂಪಿಸುತ್ತಾ ಬಂದಿದೆ ಈ ರೀತಿಯ ಪ್ರತಿಭಾ ಪುರಸ್ಕಾರ ಸನ್ಮಾನ ಗೌರವಗಳು ಪತ್ರರ‍್ತ ಹಾಗೂ ಆತನ ಕುಟುಂಬದ ಸದಸ್ಯರ ಆತ್ಮ ಗೌರವವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬ ಭಾವನೆ ರಾಜ್ಯ ಕರ‍್ಯ ನಿರತ ಪತ್ರರ‍್ತರ ಸಂಘದ ಆಶಯ ಆಗಿದೆ.
ಪತ್ರರ‍್ತ ಎಂದರೆ ಸಮಾಜಕ್ಕೆ ಬೆಳಕು ನೀಡುವ ಸೇವೆ ಆದರೆ ದೀಪದ ಕೆಳಗೆ ಕತ್ತಲೆ ಎಂಬಂತೆ ಪತ್ರರ‍್ತ ಬದುಕು ಕತ್ತಲೆಯಲ್ಲಿ ಮುಳುಗಿ ಹೋಗಬಾರದು ಸಮಾಜದ ಓರೆ ಕೋರೆ ಎತ್ತಿ ಹಿಡಿಯುವ ಪತ್ರರ‍್ತ ಮತ್ತು ಆತನ ಕುಟುಂಬ ಕೂಡ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂಬ ಆಶಯದಿಂದ ರಾಜ್ಯ ಕರ‍್ಯನಿರತ ಪತ್ರರ‍್ತ ಸಂಘವು ಸಂಘದ ಸದಸ್ಯರ ನೋವು ನಲಿವಿಗೆ ಸ್ಪಂದಿಸುತ್ತಾ ಪರಸ್ಪರ ಒಂದು ಕುಟುಂಬದಂತೆ ನಾವೆಲ್ಲ ಸಾಗುತ್ತಿದ್ದು ನಮ್ಮ ಒಗ್ಗಟ್ಟು ಇದೇ ರೀತಿ ಮುಂದುವರಿದರೆ ಒಬ್ಬ ಪತ್ರರ‍್ತನಿಗೆ ಕನಿಷ್ಠ ರ‍್ಕಾರದಿಂದ ದೊರೆಯುವ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಕರ‍್ಯನಿರತ ಪತ್ರರ‍್ತರ ಶ್ರಮಿಸಲಿದೆ ಎಂದು ಭರವಸೆ ನೀಡಿದರು.