ಹಾಸನ: ಅರಣ್ಯಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೋಮನಹಳ್ಳಿ ಗ್ರಾಮದ ಪುನೀತ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಇನ್ನು ಪುನೀತ್ ಅಕ್ರಮವಾಗಿ ಮರ ಕಡಿದ ಕೇಸ್‌ನ ಆರೋಪಿಯಾಗಿದ್ದಾನೆ. ಈ ಹಿನ್ನಲೆ ಅರಣ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಪುನೀತ್ ಒಂದೂವರೆ ಲಕ್ಷ ಹಣ ನೀಡಿದ್ದಾನೆಂದು ಪುನೀತ್ ಸಂಬಂಧಿಕರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯ ಸೋಷಿಯಲ್ ಗಾರ್ಡ್‌ಗೆ ಹಣ ನೀಡಿದ ಆರೋಪ
ಅರಣ್ಯ ಇಲಾಖೆಯ ಸೋಷಿಯಲ್ ಗಾರ್ಡ್ ಆಗಿರುವ ಪರಮೇಶ್ ಎಂಬಾತನಿಗೆ ಪುನೀತ್ ಹಣ ನೀಡಿದ್ದಾನೆಂದು ಆತನ ಸಂಬಂಧಿಕರು ಆರೋಪಿಸಿದ್ದು, ಅದರ ಜೊತೆಗೆ ಹಣ ನೀಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಈ ಹಿನ್ನಲೆ ಸಂಬಂಧಿಕರು ವಿಡಿಯೋ, ಆಡಿಯೋ ಸಮೇತ ಸಕಲೇಶಪುರ ಪೊಲೀಸ್ ಠಾಣೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಸದ್ಯ ಪುನೀತ್‌ಗೆ ಹಾಸನ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.