ದಿನಾಂಕ:03/07/2023 ರಂದು ಬೆಳಿಗ್ಗೆ ಸುಮಾರು 09:10 ಗಂಟೆ ಸಮಯದಲ್ಲಿ ಚನ್ನಾಪುರದಿಂದ ಮುಂದೆ ಮಗ್ಗೆ ಹತ್ತಿರ ಇರುವ ಮಾರುತಿ ಹಾಲೋಬ್ರಿಕ್ಸ್ ಪಕ್ಕದ ರಸ್ತೆ ಬದಿಯಲ್ಲಿ ಕೆಎ05-ಎ.ಸಿ9621 ಸಂಖ್ಯೆಯ ಆಟೋದಲ್ಲಿ ಗೋಣಿಚೀಲದಲ್ಲಿ ಗೋಮಾಂಸ ಮತ್ತು ಕಾಲುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದವರ ಮೇಲೆ ಆಲೂರು ಪೊಲೀಸ್ ಠಾಣಾ ಪಿ.ಎಸ್.ಐ ಜಾನಾಬಾಯಿ, ಪಿ.ಎಸ್.ಐ ರವರು ಸಿಬ್ಬಂದಿಗಳೊAದಿಗೆ ದಾಳಿ ಮಾಡಿ, ಆರೋಪಿಗಳಾದ 1)ರಾಮೇಗೌಡ ಬಿನ್ ತಿಮ್ಮೇಗೌಡ, 48ವರ್ಷ, ಆಟೋ ಡ್ರೆöÊವರ್ ಕೆಲಸ, ವಾಸ ಕತ್ತಿಮಲ್ಲೇನಹಳ್ಳಿ ಗ್ರಾ. ಕಸಬಾ ಹೋ. ಅರಕಲಗೂಡು ತಾ. 2)ಆನಂದ ಬಿನ್ ಕಾರಯ್ಯ, 60ವರ್ಷ, ಕೂಲಿಕೆಲಸ, ವಾಸ 3ನೇ ಬ್ಲಾಕ್, ಸುಭಾಷ್ ನಗರ, ಅರಕಲಗೂಡು ಟೌನ್ ರವರುಗಳನ್ನು ಹಾಗು ಮಾರಾಟ ಮಾಡಲು ಇಟ್ಟುಕೊಂಡಿದ್ದ 52 ಕೆ.ಜಿ ಗೋಮಾಂಸವನ್ನು ಹಾಗು ಆರೋಪಿಗಳ ಬಳಿ ಇದ್ದ 3250/- ನಗದು ಹಣ, ಆಟೋವನ್ನು ವಶಕ್ಕೆ ತೆಗೆದುಕೊಂಡು ಸ್ವ ಪರ‍್ಯಾದು ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.