ದಿನಾಂಕ:02/07/2023 ರಂದು ಬೆಳಿಗ್ಗೆ ಸುಮಾರು 11:30 ಗಂಟೆ ಸಮಯದಲ್ಲಿ ಶ್ರವಣಬೆಳಗೊಳ ಟೌನ್ ದೇವೇಗೌಡ ಸರ್ಕಲ್ ಬಳಿಯ ಅರುವನಹಳ್ಳಿ ಗ್ರಾಮದ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಪರವಾನಗಿ ಇಲ್ಲದೇ ಕಾನೂನುಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದವರ ಮೇಲೆ ಶ್ರವಣಬೆಳಗೊಳ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಶಂಕರ ರವರು ಸಿಬ್ಬಂದಿಗಳೊAದಿಗೆ ದಾಳಿ ಮಾಡಿ, ಆರೋಪಿಗಳಾದ 1)ಮಂಜೇಗೌಡ ಬಿನ್ ಆನಂದ,33 ವರ್ಷ, ವ್ಯವಸಾಯ, ವಾಸ ಕೋಡಿಬೆಳಗೊಳ ಗ್ರಾ. ಶ್ರವಣಬೆಳಗೊಳ ಹೋ. ಚನ್ನರಾಯಪಟ್ಟಣ ತಾ. 2)ಪರಮೇಶ ಬಿನ್ ಕಾಳಯ್ಯ, 45ವರ್ಷ, ವ್ಯವಸಾಯ 3)ಮಂಜೇಗೌಡ ಬಿನ್ ಲಕ್ಷ÷್ಮಣಗೌಡ, 40ವರ್ಷ, ವ್ಯವಸಾಯ 4)ಭೈರೇಗೌಡ ಬಿನ್ ಲಕ್ಕೇಗೌಡ, 38ವರ್ಷ, 5)ಲೋಕೇಶ ಬಿನ್ ನಿಂಗೇಗೌಡ, 32ವರ್ಷ, ಎಲ್ಲರೂ ಹಳೇಬೆಳಗೊಳ ಗ್ರಾ. ಶ್ರವಣಬೆಳಗೊಳ ಹೋ. ಚನ್ನರಾಯಪಟ್ಟಣ ತಾ. 6)ಶೇಖರ ಬಿನ್ ಶ್ರೀಕಂಠೇಗೌಡ, 45ವರ್ಷ, ಜಿನ್ನನಾಥಪುರ ಗ್ರಾ. ಶ್ರವಣಬೆಳಗೊಳ ಹೋ. ಚನ್ನರಾಯಪಟ್ಟಣ ತಾ. ರವರುಗಳನ್ನು ಹಾಗು ಜೂಜಾಟಕ್ಕೆ ಪಣವಾಗಿಟ್ಟುಕೊಂಡಿದ್ದ 15,100/- ನಗದು ಹಣ ಹಾಗು ಇಸ್ಪೀಟ್ ಹಾಳೆಗಳನ್ನು ವಶಕ್ಕೆ ತೆಗೆದುಕೊಂಡು, ಸ್ವ ಪರ‍್ಯಾದು ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.
ಪರವಾನಗಿ ಇಲ್ಲದೇ ಕಾನೂನುಬಾಹಿರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟವಾಡುತ್ತಿದ್ದವರಿಂದ 15,100/- ನಗದು ಹಣ ವಶ.
0