ವರ್ಷಕ್ಕೊಂದು ದಿನದ ಕಾರ್ಯಚರಣೆಗೆ ಆಗಮಿಸುವ ಜಿಲ್ಲೆಯ ತಂಬಾಕು ನಿಯಂತ್ರಣ ಕೋಶ ವಿರುದ್ಧ ಸಿಡಿದೆದ್ದ ಜಾವಗಲ್ ಗ್ರಾಮಸ್ಥರು

ಜಾವಗಲ್: ವರ್ಷವೆಲ್ಲ ರಾಜಾರೋಷವಾಗಿ ಯಾವುದೇ ಅಡ್ಡಿ ಆತಂಕ ಇಲ್ಲದೆ ತಂಬಾಕು ಉತ್ಪನ್ನ  ಮಾರುವ ಅಂಗಡಿ ಮೇಲೆ ವರ್ಷಕ್ಕೊಮ್ಮೆ ಕಾಟಾಚಾರಕ್ಕೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ತಂಡವು ಆಗಮಿಸಿ ದಂಡ ವಿಧಿಸುವುದು ಹಾಸ್ಯಾಸ್ಪದವೆಂದು ಅನೇಕ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು

ತಂಬಾಕು ಮಾರುವ ವಿಷಯದಲ್ಲಿ ಸಾಕಷ್ಟು ನಿಯಮಗಳನ್ನು ಸರ್ಕಾರ ಜಾರಿಗೊಳಿಸಿದರು ಕೂಡ ಸರಿಯಾಗಿ ಅನುಷ್ಠಾನ ಮಾಡದ ಅಧಿಕಾರಿಗಳು ವರ್ಷಕ್ಕೊಮ್ಮೆ ಆಗಮಿಸಿ ಕಾಟಾಚಾರಕ್ಕೆ ಒಂದೇರಡು ಅಂಗಡಿಗಳಿಗೆ ದಂಡ ವಿಧಿಸಿರುವುದಕ್ಕೆ ಸಾರ್ವಜನಿಕರು
ಆಕ್ಷೇಪ ವ್ಯಕ್ತಪಡಿಸುತ್ತಿದ್ದರು

ವರ್ಷ ಪೂರ್ತಿ ಯಾವುದೇ ನಿಯಮ ಇಲ್ಲದೆ ಶಾಲಾ ಮುಂಭಾಗದಲ್ಲೂ ಕೂಡ ನಿಯಮ ಮೀರಿ ಅನಧಿಕೃತವಾಗಿ ತಂಬಾಕು ಸೇವನೆ ಸ್ಟಾರ್, ಗುಟುಕ ಸೀಗರೇಟ್ ಗಳನ್ನು ಹದಿ ಅರೆಯದ ಮಕ್ಕಳಿಗೆ ಮಾರುತ್ತಿದ್ದಾರೆ ಈಗಾಗಲೇ ಈ ಹೋಬಳಿಯಲ್ಲಿ ಸಾವಿರಾರು ಯುವಕರು ಈ ರೀತಿಯ ದುಶ್ಚಟಗಳಿಗೆ
ಬಲಿಯಾಗಿದ್ದಾರೆ ಅನೇಕ ಯುವಕರು ಅನೇಕ ಖಾಯಿಲೆಗಳಿಗೆ ತುತ್ತಾಗಿದ್ದಾರೆ ಮನೆಗೆ ಮಗ ಮುಪ್ಪಿನ ಕಾಲದಲ್ಲಿ ನೋಡಿಕೊಳ್ಳುತ್ತಾನೆಂದು ಪೋಷಕರು ಆಶಾ ಗೋಪುರಗಳನ್ನು ಕಟ್ಟಿಕೊಂಡಿರುತ್ತಾರೆ ಆದರೆ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ ದಾರಿತಪ್ಪುತ್ತಿದ್ದಾರೆ ಇಷ್ಟೇಲ್ಲ ದಿನ ನಿತ್ಯ ಮಾಧ್ಯಮಗಳಲ್ಲಿ ಬಿತ್ತರವಾದರು ಕೂಡ ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳದೆ ವರ್ಷಕ್ಕೊಮ್ಮೆ ಬಂದು ಮೂರ್ನಾಲ್ಕು ಅಂಗಡಿಗಳಿಗೆ ಅಂಗಡಿಗಳಿಗೆ ದಂಡ ಹಾಕಿ ಜಾಗ ಖಾಲಿ ಮಾಡುತ್ತಾರೆ

ಪೋಷಕರ ಮತ್ತು ತಂಬಾಕು ವ್ಯಸನಿಗಳ ಪೋಷಕರ ಸಮಸ್ಯೆ ಅರಿತು ತಂಬಾಕು ನಿಯಂತ್ರಣ ಕಾಯ್ದೆ 4 ರ ಅನುಷ್ಠಾನವನ್ನು ಪ್ರತಿ ಗ್ರಾಮದಲ್ಲಿ ಪ್ರತಿನಿತ್ಯ ಸಂಚಾರ
ಮಾಡಿ ನಿಯಂತ್ರಿಸಿದರೆ ಕಾಯ್ದೆಗಳಿಗೂ ಬೆಲೆ ಬರುತ್ತದೆ

ಮುಂದಿನ ದಿನಗಳಲ್ಲಾದರು ತಂಬಾಕು ನಿಯಂತ್ರಣ ಕಾಯ್ದೆ 4 ನಿಯಮ  ಅಚ್ಚುಕಟ್ಟಾಗಿ ಜಾರಿಯಾಗಿ ಅಂಗಡಿಗಳಲ್ಲಿ ತಂಬಾಕು ಮಾರುವನಿಗೆ ಶಿಕ್ಷೆ ಆಗಿ ಯುವ ಪೀಳಿಗೆ ವ್ಯಸನಿಗಳಾಗುವುದನ್ನು ತಡೆಯುತ್ತಾ ಕಾದು  ನೋಡಬೇಕಾಗಿದೆ.

- ಜಾವಗಲ್ ದಯಾನಂದ

Post a Comment

Previous Post Next Post